ಮಾರ್ಗದರ್ಶಕರು

ಎಲ್ಎಲ್ಎ ಆನ್ಲೈನ್ ​​ಪ್ರೋಗ್ರಾಂನ ಪ್ರತಿ ಮಾರ್ಗದರ್ಶಕನು ಲಘು ಮತ್ತು ಲೈಫ್ ಅಕಾಡೆಮಿಯಿಂದ ವೃತ್ತಿಪರ ಛಾಯಾಗ್ರಹಣದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾನೆ, ಇದು ನಂಬಲಾಗದಷ್ಟು ಕಠಿಣ ತರಬೇತಿ ಪಡೆದಿದೆ. ಅವರು ಪ್ರಸ್ತುತ ಭಾರತದಾದ್ಯಂತ ತಮ್ಮ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ವಿವಿಧ ಹಿನ್ನೆಲೆಯಿಂದ ಮತ್ತು ಸಂಸ್ಕೃತಿಯಿಂದ ಬರುತ್ತಾರೆ, ಸೌಂದರ್ಯದ ಸಂವೇದನಾಶೀಲತೆಗಳ ಸಂಪತ್ತನ್ನು ನಿರ್ವಹಿಸುತ್ತಾರೆ. LLA ನಲ್ಲಿ ಒಂದೇ ತಾಂತ್ರಿಕ ಮತ್ತು ಕಲಾತ್ಮಕ ತರಬೇತಿಯಿಂದ ಎಲ್ಲರೂ ಪದವೀಧರರಾಗಿದ್ದರಿಂದ ನೀಡಲಾದ ಪ್ರತಿಕ್ರಿಯೆಯ ವಿಷಯದಲ್ಲಿ ಸ್ಥಿರತೆ ಇರುತ್ತದೆ.

Ajit SN

Ajit SN

ಅಜಿತ್ ಎಸ್.ಎನ್ ಅವರು ಮಲ್ಟಿನ್ಯಾಶನಲ್ ರೀಟೈಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅವರ ಕೆಲಸವನ್ನು ಮೆಚ್ಚುತ್ತಿದ್ದರೂ ಚಿಕ್ಕ ವಯಸ್ಸಿನಿಂದಲೂ ಅವರ ಆಸಕ್ತಿ ಪೋಸ್ಟರುಗಳು, ಕಾರ್ ಬೈಕುಗಳಚಿತ್ರಗಳ ಮೇಲಿತ್ತು. ಬಹಳ ಸಂಶೋಧನೆಯ ನಂತರ ಅವರು ಎಲ್ ಎಲ್ ಎ ಗೆ ಸೇರುವ ನಿರ್ಧಾರ ಮಾದಿದರು.

ಕಾರ್ಪೋರೇಟ್ ಜಗತ್ತಿನಿಂದ ವೃತ್ತಿಪರ ಛಾಯಾಗ್ರಾಹಕನಾಗುವುದು ಎಲ್ಲವೂ ಆಕಸ್ಮಿಕವಾಗಿತ್ತು ಅಜಿತ್ ಅವರಿಗೆ, ನಿರರ್ಗಳತೆ ಅವರ ಜೊತೆಯಾಯಿತು. ಮೊದಮೊದಲು ಹೋದಾಗ ನೀರಿನೊಳಗಿನ ಜಗತ್ತು ಅವರ ಆಸಕ್ತಿಯಾಗಿ ಆ ಉಪಕರಣಗಳೊಂದಿಗೆ ನೀರಿನಾಳಕ್ಕೆ ಇಳಿದರು. ಈಗವರು ಪ್ರಮಾಣೀಕೃತ, ನೀರಿನಾಳದ ಜಗತ್ತನ್ನು ಪ್ರತ್ಯಕ್ಷಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಚಿತ್ರಗಳ ಪ್ರದರ್ಶನ ಶೀಘ್ರದಲ್ಲೇ ಮೂಡಿಬರಲಿದೆ.

ಅವರು ಪ್ರಯಾಣ ಮಾಡುವಾಗ ಆಟೊಮೊಬೈಲ್ ಮತ್ತು ಜೀವನ ಶೈಲಿಯ ಚಿತ್ರಗಳನ್ನು ತೆಗೆಯುತ್ತಾರೆ. ಅಜಿತ್ ಎಲ್ ಎಲ್ ಎ ಅಕಾಡೆಮಿಯ ಅವಿಭಾಜ್ಯ ಅಂಗ.ಛಾಯಚಿತ್ರಗಳ ಒಲವು ಎಲ್ ಎಲ್ ಎ ಯಿಂದ ಮೂಡಿದ್ದಾಗಿದೆ. ಛಾಯಾಚಿತ್ರದ ಬಗ್ಗೆ ಕಲಿಬೇಕೆಂದಿರುವವರಿಗೆ ಮಾರ್ಗದರ್ಶನ¤ ಅವರನ್ನು ತಿದ್ದುವುದೂ ಅವರ ಮೆಚ್ಚಿನ ಕೆಲಸ. ಎಲ್ ಎಲ್ ಎ ಯ ಆನ್ಲೈನ್ ಪ್ರೋಗ್ರಾಮ್ ಕೊಡು -ಕೊಳ್ಳುವಿಕೆಯೆಂದೇ ಅವರ ಭಾವನೆ. ಅವರ ಪ್ರಕಾರ ವಿದ್ಯಾರ್ಥಿಗಳಿಂದ ಕಲಿಯುವುದು ಶಿಕ್ಷಕರಿಂದ ಕಲಿಯುವಷ್ಟೇ ಮುಖ್ಯ.

Akshay Sharma

Akshay Sharma

ಒಂದು ಬ್ರಾಂಡ್ ನ ಕಥೆಯನ್ನು ಅದರ ಛಾಯಾಚಿತ್ರವೇ ಹೇಳುವಂತೆ, ಇವರು ಲೈಫ್ ಸ್ಟೈಲ್ ಸ್ಪೇಸ್ (ಫ್ಯಾಶನ್, ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್, ಐಷಾರಾಮೀ ಚಿತ್ರ ಕಥೆ) ವಾಣಿಜ್ಯ ಕಂಪನಿಗಳ ಪಾಲುದಾರರಾಗಿದ್ದಾರೆ. ವೈಯುಕ್ತಿಕವಾಗಿ ಅವರಿಗೆ ವಾಸ್ತುಶಿಲ್ಪ, ಪ್ರಕೃತಿಯ ಅಪೂರ್ವ ಕ್ಷಣಗಳು, ಕುಸುರಿಕೆತ್ತನೆಗಳ ಚಿತ್ರಗಳನ್ನು ಸಂಗ್ರಹಿಸುವುದೆಂದರೆ ಅಪಾರ ಆಸಕ್ತಿ.

ಭೌಗೋಳಿಕ ಕ್ಷಣಗಳು, ಮತ್ತು ತಂತ್ರಜ್ನಾನಗಳಲ್ಲಿನ ಪ್ರಗತಿಗಳು, ಮಾನವ ಹಕ್ಕು ಮತ್ತು ವೈಯುಕ್ತಿಕ ಸ್ವಾತಂತ್ರ್ಯ ಇವೆಲ್ಲವೂ ಆಕ್ಷಯ್ ಅವರು ಸೂಕ್ಶ್ಮವಾಗಿ ಗಮನಹರಿಸುವ ವಿಷಯಗಳು. ಇವೆಲ್ಲವೂ ತತ್ವಶಾಸ್ತ್ರ,ಮನೋ ,ಪ್ರಾಕೃತಿಕ ಜಗತ್ತು, ಸಂಗೀತ ಮತ್ತು ಕಲೆಯ ಬಗೆಗಿನ ಅವರ ಒಲವಿನಿಂದಾಗಿ ಸೃಷ್ಟಿಯಾಗಿವೆ.

ಎಲ್ ಎಲ್ ಎ ಆನ್ ಲೈನ್ ನ ಮಾರ್ಗದರ್ಶಕರಾಗಿ ಭಾಗಿಯಾದ ಮೇಲೆ ಅಕ್ಷಯ್ ಅವರು ತಮ್ಮ ಜೀವನದ ಆಸಕ್ತಿಯ ವಿಷಯ, ಕಲಿಸಿಕೊಡುವ ಒಲವನ್ನು ಸಾಕಾರಗೊಳಿಸಬಲ್ಲವರಾಗಿದ್ದಾರೆ.

Akshya

Akshaya Vaidyanathan

ಹಲವು ಆಸಕ್ತಿಯುತ ವಿಷಯಗಳನ್ನು ಪೋಷಿಸುತ್ತ ಬಂದ ಕುಟುಂಬದ ಹಿನ್ನೆಲೆಯ ಅಕ್ಷಯಾ ಅವರಿಗೆ ಸ್ಪೂರ್ತಿಗೆ ಕೊರತೆಯಿರಲಿಲ್ಲ. ಅವರ ತಂದೆ ವೃತ್ತಿಯಲ್ಲಿ ಎಚ್ ಆರ್ ಆಗಿದ್ದರೂ ಪ್ರವೃತ್ತಿಯಲ್ಲಿ ಕಲಾವಿದರಾಗಿದ್ದರು. ತಂದೆಗೆ ಅಭಿನಯವು ತುಂಬಾ ಇಷ್ಟವೆನಿಸುತ್ತಿದ್ದುದು ತಿಳಿದ ಅಕ್ಷಯಾ ಅವರಂತೆಯೇ ತನ್ನ ಆಸಕ್ತಿಯ ವಿಷಯವಾದ ಸಿನಿಮಟೋಗ್ರಫಿಯನ್ನು ಮತ್ತು ಫೋಟೋಗ್ರಫಿಯನ್ನು ಆಯ್ದುಕೊಂಡರು. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪದವಿಯನ್ನು ಮುಗಿಸಿದರು, ಯಾವತ್ತೂ ಪುಸ್ತಕದ ಹುಳುವಾಗದೆ, ಇಷ್ಟಬಂದ ವಿಷಯಗಳನ್ನು ತಾನೇ ಮಾಡುತ್ತಾ, ಸಾಗಿದರು. ಕಾಲೇಜಿನ ಎರಡನೇ ವರ್ಷದಲ್ಲಿ ಛಾಯಾಚಿತ್ರದ ಬಗ್ಗೆ ಒಲವು ಮೂಡುತ್ತದೆ. ನಂತರ ಈಕೆ ಹಿಂತಿರುಗಿ ನೋಡಲೇ ಇಲ್ಲ. ಸಿನಿಮಾಟೋಗ್ರಾಫಿಯನ್ನು ತೀವ್ರ ಮೆಚ್ಚುತ್ತಿದ್ದ ಇವರು ಅನೇಕ ದೃಶ್ಯಗಳ ಅಪೂರ್ವ ಕ್ಷಣಗಳನ್ನು ಸೆರೆಹಿಡಿದರು. ಇವರಿಗೆ ಫೋಟೋಗ್ರಫಿ ಬರಿಯ ಹವ್ಯಾಸವಷ್ಟೆ ಅಲ್ಲ, ವೃತ್ತಿಪರ ಛಾಯಾಗ್ರಾಹಕಿಯಾಗಬೇಕೆನ್ನುವುದು ಅವರ ಆಸೆ.

ಎಲ್ ಎಲ್ ಎ ನಲ್ಲಿ ವೃತ್ತಿಪರ ಛಾಯಾಗ್ರಾಹಕ ಪದವಿ ಮುಗಿಸಿದ ಮೇಲೆ, ಅವರ ಕಲೆಯನ್ನೀಗ ಚೆನ್ನೈನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಫ್ಯಾಶನ್ ಮತ್ತು ಫ಼ುಡ್ ಫೋಟೋಗ್ರಫಿ ಇವರ ಮುಖ್ಯ ಆಸಕ್ತಿ.

ಅಕ್ಷಯಾ ಅವರು ಹೇಳುವಂತೆ, ಫೋಟೋಗ್ರಫಿ ಅವರಿಗೆ ಹೊಸ ಬದುಕು, ಹೊಸ ನಿರೀಕ್ಷೆ, ಪ್ರತೀದಿನವೂ ಭರವಸೆ ನೀಡುತ್ತಿದೆ. ಬೆಳಗ್ಗೆ ಏಳುವಾಗ “ಓ ದೇವರೆ ಯಾಕಾದರೂ ಬೆಳಗಾಯಿತು ಕೆಲಸಕ್ಕೆ ಹೋಗಬೇಕು” ಎಂದು ಒಂದು ಬಾರಿಯೂ ಅನಿಸಿದ್ದಿಲ್ಲ.ಅವರು ಅವರ ಕಲೆಯನ್ನು ಹಲವರಲ್ಲಿ ಹಂಚಿಕೊಳ್ಳಬೇಕೆಂದು ಬಯಸಿದ್ದೇ ಎಲ್ ಎಲ್ ಎ ಅಕಾಡೆಮಿಯ ಅಂಗವಾಗಲು ಕಾರಣ.

Ankit Gupta

Ankit Gupta

ಅಂಕಿತ್ ಗುಪ್ತ ಬೆಳೆದದ್ದು ಡೆಲ್ಲಿಯಲ್ಲಿ. ಬಹುದೊಡ್ಡ ಅಭಿಮಾನಿ. ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಎಂದು ಅವಕಾಶ ಸಿಕ್ಕಾಗಲೆಲ್ಲಾ ಆಟವಾಡುತ್ತಿದ್ದರು. ಎಲ್ಲರಂತೆ ಅಂಕಿತ್ ಅವರೂ ಸಹ ಯಾವುದಾದರೊಂದು ದಾರಿಯನ್ನು ಶಾಲೆ ಮುಗಿದ ನಂತರ ಆಯ್ದುಕೊಳ್ಳಬೇಕಿತ್ತು.ಒಂದೋ ಡಾಕ್ಟರ್ ಅಥವಾ ಇಂಜಿನಿಯರ್. ಅಂಕಿತ್ ಅವರು ಇಂಜಿನಿಯರಿಂಗ್ ಆಯ್ದುಕೊಂಡರು. ಕಾಲೇಜಿನಿಂದ ನೇರವಾಗಿ ಆಯ್ಕೆಯಾಗಿ ಮೈಸೂರಿಗೆ ವರ್ಗಾಯಿಸಿದರು ವಾಸ್ತವ್ಯವನ್ನು. ಮೈಸೂರಿಗೆ ಹೋಗುವ ಮೊದಲು ಅವರ ತಾಯಿ ಒಂದು ಡಿಎಸೆಲಾರ್ ಅನ್ನು ಉಡುಗೊರೆಯಾಗಿ ಕೊಟ್ಟರು. ಇದುವೇ ಆರಂಭ.ನಾಲ್ಕು ವರ್ಷಗಳು ಇನ್ಫೋಸಿಸ್ನಲ್ಲಿ ಕೆಲಸ ಮಾಡಿ ವಿದೇಶದಲ್ಲಿ ಎಮ್ ಬಿ ಎ ಪಡೆಯುವ ಆಕಾಂಕ್ಷೆ ಹೊಂದಿದ್ದರು.

ಈ ಎಲ್ಲಾ ಯೊಜನೆಗಳೂ ಅಂಕಿತ್ ಅವರ ಮನೆಯೊಡತಿಯ ಬಳಿ ಮಾತಾಡಿದ ನಂತರ ಬದಲಾಯಿತು. ಅವರು ಹೇಳಿದ ಮಾತುಗಳು ಅಂಕಿತ್ ಅವರನ್ನು ಭಾರತದಲ್ಲೇ ಉಳಿಯುವಂತೆ ಮಾಡಿತು. ಐದು ವರ್ಷಗಳಿಗೊಮ್ಮೆ ತಾಯ್ನಾಡಿಗೆ ಬರುವ ಆ ದುರವಸ್ಥೆಯನ್ನು ಪಡೆಯಬೇಕಾಗಿಲ್ಲವೆಂದು ನಿರ್ಧರಿಸಿ ಇನ್ಫ಼ೋಸಿಸನ್ನು ಬಿಟ್ಟು ಡೆಲ್ಲಿಗೆ ಹಿಂದಿರುಗಿದರು. ಅಲ್ಲಿಂದ ತಂದೆಯ ಉದ್ಯೋಗದಲಿ ಕೈಜೋಡಿಸುವ ಮನಸಾಗದೆ, ಫೋಟೋಗ್ರಫಿಯತ್ತ ಮುಖ ಮಾಡಿದರು. ಸ್ನೇಹಿತರು ಹಾಗೂ ಕುಟುಂಬದವರಿಂದ ಸಿಕ್ಕ ಬೆಂಬಲದಿಂದ ಅವರ ಆತ್ಮವಿಶ್ವಾಸ ಹೆಚ್ಚಿತು,.ಕಾಶ್ಮೀರದ ಕಣಿವೆಯ ಅಂದಚಂದದ ಸೊಬಗಿಗೆ ಮಾರುಹೋಗಿ ಕಡೆಗೆ ಒಲವು ಬಲವಾಯಿತು.

ಹಲವು ಚಿಂತೆಗಳನ್ನು ಮಾಡಿ ಕೊನೆಗೆ ಎಲ್ ಎಲ್ ಎ ಗೆ ಬಂದು ಅವರ ಪದವಿಯನ್ನು ಪೂರೈಸಿ ಪ್ರಯಾಣದ ,ವಾಸ್ತುಶಿಲ್ಪ ಹಾಗೂ ಒಳಾಂಗಣದಲ್ಲಿ ವಿಶೇಷ ಪರಿಣತಿ ಪಡೆದರು.

ಸಮಾಜಕ್ಕೆ ತಾನು ಪಡೆದದ್ದನ್ನು ಹಿಂತಿರುಗಿಸಬೇಕೆಂಬ ನಿಲುವು ಇವರದು. ಎಲ್ ಎಲ್ ಎ ಆನ್ ಲೈನ್ ಮೂಲಕ ಅವರ ಅರಿವನ್ನು ಹಂಚಲು ವೇದಿಕೆ ಸಿಕ್ಕಿದೆಯೆಂಬುದು ಬಹಳ ಸಂತೋಷದ ವಿಚಾರ.

Arnab Nath

Arnab Nath

ಛಾಯಾಗ್ರಾಹಕರಾಗಿದ್ದ ಅರ್ನಬ್ ಅವರ ತಂದೆಯೇ ಅವರ ಮೊದಲ ಸ್ಪೂರ್ತಿ.ತುಂಬಾ ಸಣ್ಣ ವಯಸ್ಸಿನಿಂದಲೇ ಮಾಡುತ್ತಿದ್ದ ಪ್ರಯೋಗಗಳನ್ನು ನೋಡುತ್ತಿದ್ದವನಿಗೆ ತಂದೆಯ ಲ್ಯಾಬ್, ಉಪಕರಣಗಳು ಆಸಕ್ತಿ ಹೆಚ್ಚಿಸಿದ್ದವು. ಅಲ್ಲಿಯೇ ಅರ್ನಬ್ ಅವರಿಗೆ ಯಾರೆಲ್ಲಾ ಛಾಯಾಗ್ರಾಹಕರೆಂಬ ವಿಚಾರಗಳು ಆರಂಭವಾಯ್ತು.

ಅರ್ನಬ್ ಅವರು ಮೂರನೇ ವಯಸ್ಸಲ್ಲಿ ಫೋಟೊ ತೆಗೆಯಲಾರಂಭಿಸಿದರು. ಅವರ ಕುಟುಂಬದ ಎಲ್ಲಾ ಕಾರ್ಯಕ್ರಮಗಳಿಗೂ ಅವರೇ ಛಾಯಾಗ್ರಾಹಕರು.

ಅರ್ನಬ್ ಅವರು ಮೂರನೇ ವಯಸ್ಸಲ್ಲಿ ಫೋಟೊ ತೆಗೆಯಲಾರಂಭಿಸಿದರು. ಅವರ ಕುಟುಂಬದ ಎಲ್ಲಾ ಕಾರ್ಯಕ್ರಮಗಳಿಗೂ ಅವರೇ ಛಾಯಾಗ್ರಾಹಕರು.

ವೃತ್ತಿಪರ ಛಾಯಗ್ರಹಣದ ಡಿಪ್ಲೋಮಾವನ್ನು ಲೈಟ್ ಅಂಡ್ ಲೈಫ್ ಅಕಾಡೆಮಿಯಲ್ಲಿ ೨೦೦೩ರಲ್ಲಿ ಪೂರೈಸಿದರು. ವಸ್ತುಗಳು, ಮೊಬೈಲ್ ಮತ್ತು ಭಾವಚಿತ್ರಗಳನ್ನು ಮುಖ್ಯವಾಗಿ ಹೇಳಿಕೊಡುವ ಫ್ಯಾಕಲ್ಟಿಯಾಗಿ ೨೦೦೮ರಲ್ಲಿ ಎಲ್ ಎಲ್ ಎ ಯನ್ನು ಸೇರಿಕೊಂಡರು. ಛಾಯಾಗ್ರಾಹಕರಾಗಿ ಬೆಳೆಯಲು ಬಹಳ ಮುಖ್ಯವಾಗಿ ಬೇಕಾದ ಸಮಯ ಹಾಗೂ ಶ್ರಮವನ್ನು ಶ್ರದ್ಧೆಯಿಂದ ಮೀಸಲಿಡುತ್ತಾರೆ.ದಕ್ಷಿಣ ಆಫ್ರಿಕಾದ ಪ್ರವಾಸ, ಕುಂಭ ಮೇಳದ ಚಿತ್ರಗಳು, ಮಥುರೆಯ ಹೋಲಿ ಆಚರಣೆ, ಪುಶ್ಕರ ಹಬ್ಬಗಳು ಕೆಲವು ಉದಾಹರಣೆಗಳು.

ಅರ್ನಬ್ ಅವರು ಬಹಳ ಮಂದಿ ತಿಳಿದುಕೊಳ್ಳಬೇಕೆಂದು ಹಾಗೂ ಫೋಟೋಗ್ರಫಿಯನ್ನು ಕಲೆ ಎಂದು ಪರಿಗಣಿಸಬೇಕೆಂದು ಬಯಸುವವರು. ಎಲ್ ಎಲ್ ಎ ಇದನ್ನು ಖಂಡಿತಾ ಸಾಧಿಸುತ್ತದೆ ಎಂಬುದು ಅವರ ಅನಿಸಿಕೆ. ಇದಲ್ಲದೆ ಹಲವು¨ ಹೇಳಿಕೊಡುವುದರಿಂದ ಇದಿನ್ನೂ ಭಾರತದಾದ್ಯಂತ ಪ್ರಸಾರವಾಗುತ್ತದೆಯೆಂದು ಅವರು ನಂಬುತ್ತಾರೆ.

Garima Chaudhary

Garima Chaudhary

ರಿಮಾ ಅವರ ಕಲೆಯ ಬಗೆಗಿನ ಆಸಕ್ತಿ ಅವರು ಎಂಟನೇ ತರಗತಿಯಲ್ಲಿರುವಾಗಲೇ ಆರಂಭವಾಯ್ತು.ಅಲ್ಲಿಂದಲೇ ಬೇರೆ ಬೇರೆ ಕಲಾ ವಿಷಯಗಳ ತರಬೇತಿಗಳಿಗಾಗಿ ಹುಡುಕಾಟ ಆರಂಭಿಸಿದರು. ತರಗತಿಯ ಪರೀಕ್ಶೆಗಳ ನಂತರ ಸಿವಿಲ್ ಸರ್ವಿಸ್ ತೆಗೆದು ಇತಿಹಾಸವನ್ನು ಅಭ್ಯಾಸ ಮಾಡತೊಡಗಿದರು. ಚೆನ್ನಾಗಿ ಆಂಕಗಳನ್ನು ಪಡೆಯುತ್ತಿದ್ದರೂ ಏ ನೋ ಒಂದು ಕೊರತೆ ಅವರನ್ನು ಕಾಡುತ್ತಿತ್ತು. ಅವರಿಗಿನ್ನೂ ಏನೋ ಬೇಕಾಗಿತ್ತು. ಹೆತ್ತವರಿಗೆ ತಿಳಿಯದೇ ಕಲೆ ಪದವಿಗೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡರು. ಹೆತ್ತವರನ್ನು ಹೇಗೋ ಒಪ್ಪಿಸಿ, ಆ ಪದವಿಗೆ ಸೇರಿಕೊಂಡರು. ಅಲ್ಲಿಯೇ ಮೊದಲ ಬಾರಿಗೆ ಅವರಿಗೆ ಛಾಯಾಗ್ರಹಣದ ಪರಿಚಯವಾಯಿತು. ವಿವಿತಾರ್ ನೊಂದಿಗೆ ಛಾಯಾಗ್ರಾಹಕಿಯಾಗಿ ಅವರಪ್ರಯಾಣ ಆರಂಭವಾಯಿತು.

ಆನಿಮೇಶನ್ ನಲ್ಲಿ ವಿಶೇಷ ಅಭ್ಯಾಸ ಪಡೆದು, ವಿಸುವಲೈಸರ್ ಆಗಿ ಕೆಲಸ ಮಾಡುತ್ತಾ ಅವರ ಪೋಸ್ಟ್ ಗ್ರಾಜುವೇಶನ್ ಮುಗಿಸಿದರು. ಅವರ ಹೆತ್ತವರೊಂದಿಗೆ ವಾಗ್ವಾದ ಕೊನೆಗೆ ಅವರನ್ನು ತನ್ನ ಒಲವಿನತ್ತ ಸಾಗಲು ಒಪ್ಪಿಸಿದರು. ಅವರ ಕ್ಷೇತ್ರದಲ್ಲಿ ಸಂತೋಷ ಹಾಗೇ ಉತ್ತಮ ಆದಾಯವೂ ಬರತೊಡಗಿದಾಗ ಹೆತ್ತವರೂ ಸಮಾಧಾನಗೊಂಡರು.

ಅವರ ಪ್ರತಿಭೆಯ ಮೂಲಕ ತನ್ನ ಪತಿಯನ್ನು ತೃಪ್ತನಾಗಿಸಿ ಡಿಎಸೆಲಾರ್ ನ್ನು ಉಡುಗೊರೆಯಾಗಿ ಪಡೆದರು. ನಂತರ ಅವರು ಎಲ್ ಎಲ್ ಎ ಗೆ ಅರ್ಜಿ ಸಲ್ಲಿಸಿ ವೃತ್ತಿಪರ ಛಾಯಾಗ್ರಹಣದ ಪದವಿಯನ್ನು ಮುಗಿಸಿದರು.

೨೦೧೧ರಲ್ಲಿ ಗರಿಮ ಅವರು ಹಲವಾರು ಇ ಕಾಮರ್ಸ್ ಅಸೈನ್ಮೆಂಟ್ ಗಳಿಸಿ ಇ ಕಾಮರ್ಸ್ ವೇವ್ ಬ್ಯಾಕ್ ಪಡೆದರು. ೨೦೧೧ರಲ್ಲಿ ಅವರ ಸ್ಟುಡಿಯೋ ಆರಂಭಿಸಿದರು. ಅವರ ಅರಿವನ್ನು ಒರೆ ಹಚ್ಚಿ ಹಲವು ಕೆಲಸಗಳನ್ನು ಮಾಡಿದರು. ಬೆಂಗಳೂರಿನಲ್ಲಿರುವ ಅವರು ಕಲಾ ನಿರ್ದೇಶಕರಾಗಿ,ಗ್ರಾಫಿಕ್ ಡಿಸೈನರ್ ಆಗಿ, ಪೈಂಟರ್ ಆಗಿ, ಛಾಯಾಗ್ರಾಹಕಿ ಹಾಗೂ ಬ್ಲಾಗು ಬರಹಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಲವು ಮಂದಿಗೆ ತಲುಪಬೇಕಾದ ಕಲೆ ಫೋಟೋಗ್ರಫಿ ಎಂಬುದು ಇವರ ನಂಬಿಕೆ. ಎಲ್ ಎಲ್ ಎ ಆನ್ ಲೈನ್ ಮೂಲಕ ಹಲವು ಭಾಷೆಗಳ ಮೂಲಕಹಲವರಿಗೆ ಇದು ತಲುಪುವುದು ಎಂದು ಅವರ ಭರವಸೆ. ಎಲ್ ಎಲ್ ಎ ಆನ್ಲೈನ್ ಬಗ್ಗೆ ಸಂತೋಷದಿಂದಿದ್ದಾರೆ.

kavitha

Kavitha Swaminathan

ತಿರುಪ್ಪೂರಿನ ಪ್ರಸಿದ್ಧ ಹಾಗೂ ಶ್ರೀಮಂತ ಕುಟುಂಬದ ಕವಿತಾ ಬಹಳಷ್ಟು ಪಾಕೆಟ್ ಮನಿಯೊಂದಿಗೆ ಪ್ರತೀವಾರ ಶಾಲೆಗೆ ಬರುತ್ತಿದ್ದರು.ಅವರಿಗೆ ಗೊತ್ತಿದ್ದ ಒಂದೇ ವಿಷಯ ,ಎಷ್ಟೇ ಚೊಕೊಲೇಟ್ ತಿಂದರೂ ಕಣ್ಣು ಇನ್ನೊಂದನ್ನು ಅರಸಿ ಹೋಗುತ್ತಿತ್ತು. ಶಾಲೆಯಲ್ಲಿ ಉತ್ತಮ ಅಂಕ ಗಳಿಸಿ ಡಾಕ್ಟರ್ ಆಗಬೇಕೆಂಬ ಬಯಕೆಯೊಂದಿಗೆ, ಜ಼ೂವಾಲಜಿ, ಫಿಸಿಕ್ಸ್,ಬಾಟನಿಗೆ ಗಮನ ಹರಿಸಿದರು. ಡಾಕ್ಟ್ರೇಟ್ ಪದವಿಗಿನ್ನೂ ಒಂದು ವಾರವಿರುವಾಗ ತನ್ನಿಂದ ಅದು ಸಾಧ್ಯವಿಲ್ಲವೆಂದು ನೊಂದು ಅದಕ್ಕೆ ತಿಲಾಂಜಲಿ ನೀಡಿದರು. ನಂತರ ಹಲವು ಕಡೆ ಬಿಕಾಂ ಪದವಿಗೆ ಪ್ರಯತ್ನಿಸಿ ಕೊನೆಗೆ ಪೆರಂಡುರೈನ ಮಹಾರಾಜಾ ಕಾಲೇಜಿನಲ್ಲಿ ವಿಶುವಲ್ ಕಮ್ಮ್ಯುನಿಕೇಶನ್ ಗೆ ಸೇರಿಕೊಂಡರು. ಪೆಂಟ್ಯಾಕ್ಸ್ ಕೆ ೧೦೦, ಸ್ವಾತಂತ್ರ್ಯ, ಕತ್ತಲೆಕೋಣೆ ಇವೆಲ್ಲವೂ ಅವರ ಮನದಾಳದಲ್ಲಿ ಹೋಗಿ ನಿಂತಿತು. ಎಲ್ಲರೂ ತಮ್ಮ ಉತ್ತಮ ಭಾವಚಿತ್ರವನ್ನು ಬಯಸುತ್ತಾರಲ್ಲವೇ? ಅವರ ಎಲ್ಲಾ ಭಾವನೆಗಳನ್ನೂ ಹೊರಹಾಕಲು ಛಾಯಾಚಿತ್ರವು ನೆರವಾಯಿತೆನ್ನುತ್ತಾರೆ ಕವಿತ. ಫೋಟೋ ತೆಗೆಯುವಾಗ ನಾಯಿಯ ನೋವು, ಹೂವಿನ ಅಂದ, ವಿಸ್ತಾರವಾದ ಸೌಂದರ್ಯ, ಇವೆಲ್ಲವೂ ಫೋಟೋದೊಂದಿಗೆ ಅನಾವರಣಗೊಳ್ಳುತ್ತದೆ. ಅಂದೇ ಅವರು ತಮ್ಮ ಜೀವನದುದ್ದಕ್ಕೂ ಛಾಯಾಗ್ರಾಹಕಿಯಾಗಿರಬೇಕೆಂದು ನಿರ್ಧರಿಸಿದರು.

ಎಲ್ ಎಲ್ ಎ ನಲ್ಲಿ ೨೦೦೨ ರಲ್ಲಿ ಕಲಿತರು. ಪ್ರತೀದಿನವೂ .. ಕೋರ್ಸ್ ಮುಗಿದ ನಂತರವು ಇನ್ನೊಬ್ಬ ವೃತ್ತಿಪರ ಛಾಯಾಗ್ರಾಹಕರನ್ನು ನೋಡಿದಾಗೆಲ್ಲಾ ಇನ್ನೂ ಬೆಳೆಯಬೇಕೆಂಬ ಭಾವ ಮೂಡುತ್ತಿತ್ತು. ಅವರೀಗ ಲೈಟ್ ಅಂಡ್ ಲೈಫ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತೀದಿನವೂ ಕಲಿಸುತ್ತ, ಕಲಿಯುತ್ತ ತಾನೊಬ್ಬ ಉತ್ತಮ ಛಾಯಾಗ್ರಾಹಕಿ ಗುರಿಯಲ್ಲಿದ್ದಾರೆ. ಹಾಗೇ ತಾನು ಸಾಧಿಸಿದ್ದನ್ನು ಇತರರಿಗೂ ಹಂಚಬೇಕೆಂದು ಹಾಗೇ ಫೋಟೋಗ್ರಫಿಯ ಆಳವನ್ನು ಇನ್ನಷ್ಟು ಅರಿಯಬೇಕೆನ್ನುವ ಉತ್ಸಾಹದಲ್ಲಿದ್ದಾರೆ. ಎಲ್ ಎಲೆ ಆನ್ ಲೈನ್ , ಅವರೆನ್ನುವಂತೆ, ಇದು ಒಂಬತ್ತು ಭಾಷೆಗಳಲ್ಲಿರುವುದರಿಂದ ಹಲವು ಪ್ರತಿಭಾವಂತರಿಗೆ ನೆರವಾಗಬಲ್ಲದು ಎನ್ನುತ್ತಾರೆ.

Khushboo Agarwal

Khushboo Agarwal

ನೆನಪಿನಂಗಳದಲ್ಲಿ ಸಾಗುತ್ತಾ ನನ್ನ ತಂದೆ ತಮ್ಮ ಹುಟ್ಟೂರಾದ ಕಲ್ಕತ್ತಾವನ್ನು ಬಿಟ್ಟು ಚೆನ್ನೈಯಲ್ಲಿ ಬಂದು ನೆಲೆಸಿ ಸ್ವಂತ ಉದ್ಯೋಗವನ್ನಾರಂಭಿಸಿದರು. ಆಳವಾಗಿ ಬೇರೂರಿದ್ದ ಉತ್ತರ ಭಾರತದ ಆಚಾರ, ಜನರು ,ಆಹಾರ ಸಂಸ್ಕೃತಿಯ ತವರೂರಾದ ತಮಿಳುನಾಡಿನ ನೆರಳು ಹೀಗೆ ನನಗೆ ಎರಡೂ ಭಾಗಗಳ ಪ್ರಭಾವ ಸಂತೋಷವನ್ನೇ ತಂದಿತ್ತು.

ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ನಾಟಕ, ಚರ್ಚೆ,ಹೀಗೆ ಹಾಡೊಂದನ್ನು ಬಿಟ್ಟು ಉಳಿದೆಲ್ಲದರಲ್ಲೂ ಭಾಗವಹಿಸುತ್ತಿದ್ದೆ. ತರಗತಿಯಲ್ಲಿ ಮೊದಲ ಸ್ಥಾನ ಪಡೆಯುವುದು ನನ್ನ ಗುರಿಯಾಗಿತ್ತು. ಆದರೆ ಹತ್ತನೇ ತರಗತಿಯ ಫಲಿತಾಂಶ ಬಂದು ನಾನದರಲ್ಲಿ ಐದನೇ ಸ್ಥಾನ ಪಡೆದಿದ್ದೆ ಎಂದು ತಿಳಿದಾಗ ಎಲ್ಲವೂ ಬದಲಾಯಿತು.

ನನ್ನ ಆತ್ಮವಿಶ್ವಾಸ ಕುಗ್ಗಿತು.ನಾನು ಸರಳವಾಗಿ ವಿಷಯವನ್ನು ಕೊಂಡೊಯ್ಯೋಣವೆಂದು ನಿರ್ಧರಿಸಿದೆ. ನೃತ್ಯ, ಭರತನಾಟ್ಯ,ಕಥಕ್, ಹೀಗೆ ಯಾಗಿ ಗುರುತಿಸಿಕೊಂಡೆ. ಕಲಿಯುವಿಕೆಯನ್ನು ಆನಂದಿಸತೊಡಗಿದೆ.ನಂತರ ಜಿವ್,ಸಾಲ್ಸಾ, ಭಚತಾ ವನ್ನು ಸೇರಿಸಿಕೊಂಡೆಜೀವನ ಚೆನ್ನಾಗಿ ಸಾಗುತ್ತಿತ್ತು, ನಾನು ವಿಸುವಲ್ ಕಮ್ಮ್ಯುನಿಕೇಶನ್ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಆಗ ಫೋಟೋಗ್ರಫಿಯ ಪರಿಚಯವಾಗಿ ನನ್ನ ಜೀವನದ ದಿಕ್ಕೇ ಬದಲಾಯಿತು. ಇಡೀ ಜಗತ್ತಿನೊಂದಿಗೆ ಸಂಪರ್ಕ ಹೊಂದುವ ಶಕ್ತಿ ಅದು ನನಗೆ ನೀಡಿತು. ಆಗಲೇ ಲೈಟ್ ಅಂಡ್ ಲೈಫ್ ಅಕಾಡೆಮಿಯ ಆಗಮನವಾಯಿತು. ನನ್ನ ಪ್ರತಿ ಕ್ಷಣವನ್ನೂ ಆನಂದಿಸಿದೆ.

ಇಂದು ನಾನಿನ್ನೂ ವಿವಿಧತೆಯನ್ನು ಹುಡುಕುತ್ತಿದ್ದೇನೆ. ನನ್ನ ವೃತ್ತಿ ಫೋಟೋಗ್ರಫಿಯಾಗಿದ್ದರೂ ನೃತ್ಯ ಮಾಡುವುದು ಹೇಳಿಕೊಡುವುದು ನನ್ನ ಆನಂದ. ಈಗ ನನಗೆ ನನ್ನ ಅರಿವನ್ನು ಹಂಚಿಕೊಳ್ಳುವ ಅಪೂರ್ವ ಅವಕಾಶ ಎಲ್ ಎಲ್ ಎ ಆನೈನ್ ಮೂಲಕ ಸಿಕ್ಕಿದೆ, ನನ್ನ ಸಂತೋಷ ದ್ವಿಗುಣವಾಗಿದೆ,

Mihir H

Mihir Hardikar

ನನ್ನ ಆಸೆಯಂತೇ ನನ್ನ ಜೀವನ ಸಾಗಿರುತ್ತಿದ್ದರೆ ನಾನಿಂದು ಒಬ್ಬ ಶೂ ಡಿಸೈನರ್ ಆಗಿರುತ್ತಿzÉ. ಯಾಕೆಂದರೆ ನನ್ನ ಚಿಕ್ಕ ವಯಸ್ಸಿನಲ್ಲಿ ಕಸಿನ್ ನ ನಲ್ಲಿ ಹೊಸ ಡಿಸೈನ್ ಗಳ ಶೋಧದಲ್ಲಿರುತ್ತಿದ್ದೆ. ನೈಕ್ ನಲ್ಲಿ ಕೆಲಸ ಮಾಡಬೇಕೆಂದು ಕನಸು ಕಾಣುತ್ತಿದ್ದೆ. ನನ್ನ ಶಾಲಾ ಸ್ನೇಹಿತರ ಹೆತ್ತವರು ಈಗಲೂ ನನ್ನನ್ನು ಹಾಸ್ಯ ಮಾಡುವುದಿದೆ. ಅವರಿಗೆಲ್ಲಾ ನಾನೊಬ್ಬ ಚಮ್ಮಾರನಾಗಲಿದ್ದೇನೆಂದು ಹೇಳುತ್ತಿದ್ದೆ.

ನನ್ನ ಹನ್ನೆರಡನೇ ತರಗತಿಯಲ್ಲಿ ಪರಬೋಲಾ ಗಣಿತದ ಸಮಸ್ಯೆ ಬಿಡಿಸುವುದು ಇವೆಲ್ಲಕ್ಕಿಂತ ಹೆಚ್ಚಾಗಿ ಬಯಾಲಜಿಯಲ್ಲಿ ಗಿಡ ಮತ್ತು ಕಪ್ಪೆಯ ಚಿತ್ರ ಮಾಡುವುದನ್ನು ಆಸ್ವಾದಿಸುತ್ತಿದ್ದೆ, , ಹಾಗಾಗಿ ನಾನು ವಾಣಿಜ್ಯ ಕಲೆಯನ್ನು ಆಯ್ದುಕೊಂಡು ಮುಂಬಯಿಯ ಜೆ ಜೆ ಆರ್ಟ್ಸ್ ಕಾಲೇಜಿಗೆ ಸೇರಿಕೊಂಡೆ. ಪ್ರತಿದಿನ ನನ್ನ ಹಿರಿಯ ವಿದ್ಯಾರ್ಥಿಗಳಿಂದ ಸ್ಪೂರ್ತಿ ಪಡೆಯುತ್ತಾ ಆನಿಮೇಶನ್, ಇಲ್ಲಸ್ಟ್ರೇಶನ್, ಪ್ರದರ್ಶನ ಮತ್ತು ಮಾರಾಟ, ಛಾಯಾಗ್ರಹಣ ಹೀಗೆ ಅನೇಕ ಹೊಸ ವಿಷಯಗಳಿಂದ ಪ್ರಚೋದಿತನಾದೆ. ಆಗಲೇ ನಾನು ಐಡಿಯಾಲಜಿಗಿಂತ ಅಡ್ವರ್ಟೈಸಿಂಗ್ ನಲ್ಲಿ ಹೆಚ್ಚು ಆಸಕ್ತನೆಂಬುದನ್ನು ಕಂಡುಕೊಂಡೆ.

ಎಲ್ ಎಲ್ ಎ ಎಂಬುದು ಕಲಿಯಲು, ಕಲಿಯದಿರಲು,ಎಲ್ಲದಕ್ಕೂ ಬಹಿರಂಗ. ನಾನು ಏನೆಲ್ಲಾ ಅಸೈನ್ಮೆಂಟ್ಗಳು ಬರುತ್ತವೋ ಅವೆಲ್ಲವನ್ನೂ ಪ್ರಯತ್ನಿಸಿದೆ. ಅಡುಗೆ ಮಾಡುವುದರ ಅಭ್ಯಾಸ ಮಾಡಿಕೊಂಡೆ. ಬಣ್ಣಗಳ, ರೂಪಗಳ,ತಾಜಾತನದ ಜೊತೆ ಪ್ರಯೋಗವನ್ನಾರಂಭಿಸಿದೆ. ಇದರೊಂದಿಗೆ ನಾನು ಆಹಾರ ಮತ್ತು ಪಾನೀಯಗಳಿಗಿಂತ ಹೆಚ್ಚಾಗಿ ಛಾಯಾಗ್ರಹಣ ನನ್ನಿಷ್ಟ ಎಂಬುದನ್ನರಿತೆ.

ಇದ್ದಲ್ಲೇ , ನಿಧಾನವಾಗಿ ಆಹಾರಕ್ಕೆ ಸಂಬಂಧಿಸಿದ ವೈಯುಕ್ತಿಕ ಪ್ರೊಜೆಕ್ಟುಗಳನ್ನು ಮಾಡತೊಡಗಿದೆ. ಈ ರೀತಿಯ ಪ್ರೊಜೆಕ್ಟುಗಳು ನನ್ನ ಆಸಕ್ತಿಯನ್ನು ಮತ್ತು¨ ಭಾವಚಿತ್ರಣ,ಬದುಕು,ಮತ್ತು ಆಹಾರದ ಛಾಯಾಗ್ರಹಣವನ್ನು ಬಳಸಿಕೊಳ್ಳುತ್ತದೆ .

ಹಲವಾರು ಬಾರಿ ಒಬ್ಬ ಕಲಾವಿದ ಭಾಷೆಯಿಂದಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ ಎಲ್ ಎ ಆನ್ಲೈನ್ ಪ್ರೋಗ್ರಾಮ್ ಗ್ರಾಮೀಯ ಭಾಷೆಗಳಲ್ಲಿರುವುದರಿಂದ ಬಹಳಷ್ಟು ಮಂದಿಯನ್ನು ತಲುಪುತ್ತದೆ. ಈ ಪ್ರೊಜೆಕ್ಟ್ನ ಭಾಗವಾಗಿರಲು ನನಗೆ ತುಂಬಾ ಸಂತೋಷವಾಗಿದೆ.

Monika Adlakha

Monika Adlakha

ಮಾತಾಡುವುದರಲ್ಲಿರುವ ಸಮಸ್ಯೆ ಏನೆಂದರೆ, ಎಲ್ಲರೂ ಮಾತಾಡಲಾರಂಭಿಸಿದಾಗ ಕೇಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಮತ್ತು ನಾನಲ್ಲಿ ಮೌನವನ್ನು ಕಂಡುಕೊಳ್ಳುತ್ತೇನೆ. ಈ ಮೌನ ಗಮನಿಸುವಂತೆ ಮಾಡುತ್ತದೆ. ಯೋಚಿಸುವಂತೆ ಮಾಡುತ್ತದೆ. ಹಂಚಿಕೊಳ್ಳುವಂತೆ ಮಾಡುತ್ತದೆ. ಸಂವಹಿಸುವಂತೆ ಮಾಡುತ್ತದೆ. ಈ ಮೌನವೇ ನನ್ನ ಹೊಸ ಅವತಾರವನ್ನು ವಿಶ್ಲೇಷಿಸುತ್ತದೆ. ಅದುವೇ ಛಾಯಗ್ರಾಹಕಿ. ಆಹಾರಪ್ರಿಯೆ, ಬಹಳ ಸೂಕ್ಷ್ಮವಾಗಿ ಜನರನ್ನು ಗಮನಿಸುವುದು, ಬರಹಗಾರ್ತಿ, ಮತ್ತು ಒಬ್ಬ ಮುಸಾಫಿರ್!

ಕಳೆದ ಹದಿನೈದು ವರ್ಷಗಳಲ್ಲಿ, ಬದುಕನ್ನು ಶಬ್ದಗಳಲ್ಲಿ ಹೊರಹಾಕಿದ್ದೇನೆ. ಕೆಲವೊಮ್ಮೆ ಮಾಧ್ಯಮ ಪ್ರತಿನಿಧಿಯಾಗಿ ! ಕೆಲವೊಮ್ಮೆ ವಿಶೇಷ ಸಂವಹನಕಾರಳಾಗಿ. ಅದೇ ಸಾಕಾಗುತ್ತಿತ್ತು,,ಆದರೆ ಹಾಗಾಗಲಿಲ್ಲ!!

ಬದುಕಿನ ಅರ್ಥವೇ ಅರ್ಥವಿರುವ ಬದುಕು. ಈ ಪ್ರಶ್ನೆಗಳೇ ನನ್ನನ್ನು ಅಪೂರ್ಣವಾಗಿರುವುದನ್ನೂ ಹೊಗಳುವಂತೆ ಮಾಡಿತು, ಹೇಗೆ ನನ್ನ ಕಂಗಳೊಡನೆ ಭಾವುಕಳಾಗಬೇಕು, ಅಡಗಿರುವ ಸೌಂದರ್ಯ ಕಂಡುಕೊಳ್ಳಲು ಮತ್ತು ಕ್ಷಣಗಳನ್ನು ಸೆರೆಹಿಡಿಯುವಂತೆ ಮಾಡಿತು.

ನನ್ನ ಬದುಕನ್ನು ಹಲವು ಮುಖಗಳು,ಹಲವು ಪ್ರದೇಶಗಳು ಮತ್ತು ಬದುಕನ್ನು ಬಿಂಬಿಸಲು ಸಹಕಾರಿಯಾಗಿರುವುದಕ್ಕೆನನ್ನೊಳಗಿನ ಅಲೆಮಾರಿಯನ್ನು ವಂದಿಸುತ್ತೇನೆ.

ಲೈಟ್ ಅಂಡ್ ಲೈಫ್ ಅಕಾಡೆಮಿಯಿಂದ ನನ್ನ ಜೀವನದುದ್ದಕ್ಕೂ ನನ್ನೊಂದಿಗಿರುವ ಅನುಭವವನ್ನು ನೀಡಿದೆ. ಈ ಸವಾಲು, ಆಶ್ಚರ್ಯ, ಸಂಪೂರ್ಣತೆ ನನ್ನೊಂದಿಗೇ ಕೊನೆಯಾಗಲು ನಾನು ಬಯಸುವುದಿಲ್ಲ.

ಛಾಯಾಗ್ರಹಣದ ಹಲವು ಆಯಾಮಗಳನ್ನು ನೀಡಿದ, ಉಪಾಯಗಳನ್ನು ಕೊಟ್ಟ ಎಲ್ ಎಲ್ ಎ ಅಕಾಡೆಮಿಯೊಂದಿಗೆ ಯಾವತ್ತೂ ಒಡನಾಡಿಯಾಗಿರಲು ಬಯಸುತ್ತೇನೆ.

ಲೈಟ್ ಅಂಡ್ ಲೈಫ್ ಅಕಾಡೆಮಿ ಬರೀ ಅಕಾಡೆಮಿಯಲ್ಲ, ಇದೊಂದು ಶಿಸ್ತು.ಇಲ್ಲಿ ನೀವೊಬ್ಬ ಬೆಳಕು ಮತ್ತು ನೆರಳಿನ ಜಾದೂ ನೋಡುವ ಕುತೂಹಲಕಾರೀ ಪ್ರೇಕ್ಷಕನಾಗಿರುತ್ತೀರಿ.. ಈ ಅಕಾಡೆಮಿಯ ಮಾರ್ಗದರ್ಶಿಯಾಗಿರುವುದು ಹೆಮ್ಮೆ ತರುವಂತಹ ವಿಚಾರ. ಹಾಗಾಗಿ, ನಿಮ್ಮ ಬದುಕಿನ ಉದ್ದೆಶ ಅರಿಯಲು ಮತ್ತು ನಿಮ್ಮ ïನಲ್ಲಿ ಬದುಕಲು ಬನ್ನಿ.

Punya Arora

Punya Arora

ಮಾತಾಡುವುದರಲ್ಲಿರುವ ಸಮಸ್ಯೆ ಏನೆಂದರೆ, ಎಲ್ಲರೂ ಮಾತಾಡಲಾರಂಭಿಸಿದಾಗ ಕೇಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಮತ್ತು ನಾನಲ್ಲಿ ಮೌನವನ್ನು ಕಂಡುಕೊಳ್ಳುತ್ತೇನೆ. ಈ ಮೌನ ಗಮನಿಸುವಂತೆ ಮಾಡುತ್ತದೆ. ಯೋಚಿಸುವಂತೆ ಮಾಡುತ್ತದೆ. ಹಂಚಿಕೊಳ್ಳುವಂತೆ ಮಾಡುತ್ತದೆ. ಸಂವಹಿಸುವಂತೆ ಮಾಡುತ್ತದೆ. ಈ ಮೌನವೇ ನನ್ನ ಹೊಸ ಅವತಾರವನ್ನು ವಿಶ್ಲೇಷಿಸುತ್ತದೆ. ಅದುವೇ ಛಾಯಗ್ರಾಹಕಿ. ಆಹಾರಪ್ರಿಯೆ, ಬಹಳ ಸೂಕ್ಷ್ಮವಾಗಿ ಜನರನ್ನು ಗಮನಿಸುವುದು, ಬರಹಗಾರ್ತಿ, ಮತ್ತು ಒಬ್ಬ ಮುಸಾಫಿರ್!

ಕಳೆದ ಹದಿನೈದು ವರ್ಷಗಳಲ್ಲಿ, ಬದುಕನ್ನು ಶಬ್ದಗಳಲ್ಲಿ ಹೊರಹಾಕಿದ್ದೇನೆ. ಕೆಲವೊಮ್ಮೆ ಮಾಧ್ಯಮ ಪ್ರತಿನಿಧಿಯಾಗಿ ! ಕೆಲವೊಮ್ಮೆ ವಿಶೇಷ ಸಂವಹನಕಾರಳಾಗಿ. ಅದೇ ಸಾಕಾಗುತ್ತಿತ್ತು,,ಆದರೆ ಹಾಗಾಗಲಿಲ್ಲ!!

ಬದುಕಿನ ಅರ್ಥವೇ ಅರ್ಥವಿರುವ ಬದುಕು. ಈ ಪ್ರಶ್ನೆಗಳೇ ನನ್ನನ್ನು ಅಪೂರ್ಣವಾಗಿರುವುದನ್ನೂ ಹೊಗಳುವಂತೆ ಮಾಡಿತು, ಹೇಗೆ ನನ್ನ ಕಂಗಳೊಡನೆ ಭಾವುಕಳಾಗಬೇಕು, ಅಡಗಿರುವ ಸೌಂದರ್ಯ ಕಂಡುಕೊಳ್ಳಲು ಮತ್ತು ಕ್ಷಣಗಳನ್ನು ಸೆರೆಹಿಡಿಯುವಂತೆ ಮಾಡಿತು.

ನನ್ನ ಬದುಕನ್ನು ಹಲವು ಮುಖಗಳು,ಹಲವು ಪ್ರದೇಶಗಳು ಮತ್ತು ಬದುಕನ್ನು ಬಿಂಬಿಸಲು ಸಹಕಾರಿಯಾಗಿರುವುದಕ್ಕೆನನ್ನೊಳಗಿನ ಅಲೆಮಾರಿಯನ್ನು ವಂದಿಸುತ್ತೇನೆ. ಲೈಟ್ ಅಂಡ್ ಲೈಫ್ ಅಕಾಡೆಮಿಯಿಂದ ನನ್ನ ಜೀವನದುದ್ದಕ್ಕೂ ನನ್ನೊಂದಿಗಿರುವ ಅನುಭವವನ್ನು ನೀಡಿದೆ. ಈ ಸವಾಲು, ಆಶ್ಚರ್ಯ, ಸಂಪೂರ್ಣತೆ ನನ್ನೊಂದಿಗೇ ಕೊನೆಯಾಗಲು ನಾನು ಬಯಸುವುದಿಲ್ಲ. ಛಾಯಾಗ್ರಹಣದ ಹಲವು ಆಯಾಮಗಳನ್ನು ನೀಡಿದ, ಉಪಾಯಗಳನ್ನು ಕೊಟ್ಟ ಎಲ್ ಎಲ್ ಎ ಅಕಾಡೆಮಿಯೊಂದಿಗೆ ಯಾವತ್ತೂ ಒಡನಾಡಿಯಾಗಿರಲು ಬಯಸುತ್ತೇನೆ. ಲೈಟ್ ಅಂಡ್ ಲೈಫ್ ಅಕಾಡೆಮಿ ಬರೀ ಅಕಾಡೆಮಿಯಲ್ಲ, ಇದೊಂದು ಶಿಸ್ತು.ಇಲ್ಲಿ ನೀವೊಬ್ಬ ಬೆಳಕು ಮತ್ತು ನೆರಳಿನ ಜಾದೂ ನೋಡುವ ಕುತೂಹಲಕಾರೀ ಪ್ರೇಕ್ಷಕನಾಗಿರುತ್ತೀರಿ.. ಈ ಅಕಾಡೆಮಿಯ ಮಾರ್ಗದರ್ಶಿಯಾಗಿರುವುದು ಹೆಮ್ಮೆ ತರುವಂತಹ ವಿಚಾರ. ಹಾಗಾಗಿ, ನಿಮ್ಮ ಬದುಕಿನ ಉದ್ದೆಶ ಅರಿಯಲು ಮತ್ತು ನಿಮ್ಮ ïನಲ್ಲಿ ಬದುಕಲು ಬನ್ನಿ.

Rejoi Krishna

Rejoi Krishna

ನನಗೆ ಸಾಧಾರಣ ಮಧ್ಯಮವರ್ಗದ ಜನ ಬಯಸುವಂತೆ ಇಂಜಿನಿಯರಿಂಗ್ ಮೆಡಿಸಿನ್ ಕಲಿಯಬೇಕೆಂಬ ಆಯ್ಕೆ ಇರಲಿಲ್ಲ. ನನಗಿದ್ದ ಒಂದೇ ಒಂದು ಬಯಕೆ ಕೊಯಂಬತ್ತೂರಿನ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಸೈಕಾಲಜಿ ಕಲಿಯಬೇಕೆಂಬುದಾಗಿತ್ತು. ಎರಡನೇ ವರ್ಷದಲ್ಲಿ ವಿಸ್ಕಮ್ ಎಂಬ ವಿಷಯ ಪರಿಚಯವಾಯಿತು. ವಿಸ್ಕಾಮ್ ನ ವಿದ್ಯಾರ್ಥಿಗಳೊಡನೆ ಮಾತಾಡುತ್ತ ನನ್ನ ಅಸ್ತಿತ್ವ ಜನರನ್ನು ಮನೋರಂಜಿಸುವುದರಲ್ಲಿದೆ ಎಂದು ಭಾವಿಸಿ ರೇಡಿಯೋ ಮಿರ್ಚಿಯಲ್ಲಿ ಆರ್ ಜೆ ಆಗಿ ಸೇರಿಕೊಂಡೆ. ನಾನು ಕೆಲವೇ ದಿನಗಳಲ್ಲಿ ಪ್ರಸಿದ್ಧಿ ಪಡೆದೆ. ಏಳು ವರ್ಷಗಳ ನಂತರ ನಾನು ಜೀವನದಲ್ಲಿ ಏನೋ ಬೇರೆ ಮಾಡಬೇಕೆಂದು ಅರಿತೆ. ವಿಭಿನ್ನವಾಗಿ ಮಾಡಬೇಕೆಂದು ನಿರ್ಧರಿಸಿ ಫೋಟೋಗ್ರಫಿಯನ್ನು ಆಯ್ದುಕೊಂಡೆ. ನಾನು ಅನುಭವಿಸಿದ ವಿಷಯಗಳಿಂದ ಜನರನ್ನು ರಂಜಿಸದೆ ನಾನು ನೋಡಿದ ವಿಷಯಗಳನ್ನು ಅವರಿಗೆ ತೋರಿಸಿ ಸಂತೋಷಪಡಿಸಬೇಕೆಂದು ತೀರ್ಮಾನಿಸಿದೆ.

ನಾನು ಲೈಟ್ ಅಂಡ್ ಲೈಫ್ ಅಕಾಡೆಮಿಯಲ್ಲಿ ಕಲಿಯಬೇಕೆಂದು ನಿರ್ಧರಿಸಿ ಸೇರಿದೆ. ಎಲ್ಲಾ ಕಲೆಗಳು ಅಭ್ಯಾಸ ಮಾಡುತ್ತಾ ನನ್ನ ಕನಸು ವೃತ್ತಿಪರ ಛಾಯಾಗ್ರಹಣದತ್ತ ವಾಲಿತು. ಎಲ್ ಎಲ್ ಎ ಅಕಾಡೆಮಿಯು ಕಲಿಯಲು ವಯಸ್ಸು ಮುಖ್ಯವಲ್ಲ, ಮನಸು ಮುಖ್ಯವೆಂದು ಪ್ರೋತ್ಸಾಹಿಸಿತು. ಇಂದಿನ ನನ್ನನ್ನು ರೂಪಿಸಿದ ಎಲ್ ಎಲ್ ಎ ಗೆ ಅಪಾರ ಋಣಿ.

ನನ್ನನ್ನು ಒಬ್ಬ ವಾಸ್ತುಶಿಲ್ಪಕಾರ ಮೊಬೈಲ್,ಪ್ರವಾಸೀ ಛಾಯಾಗ್ರಾಹಕನೆಂದು ಅರಿತುಕೊಳ್ಳುತ್ತಿದ್ದೇನೆ, ನಾನೇನು ಕಲಿತೆನೋ ಅದನ್ನು ಹಂಚಿಕೊಳ್ಳಲು ಎಲ್ ಎಲ್ ಎ ಆನ್ಲೈನ್ ಅವಕಾಶ ಮಾಡಿಕೊಟ್ಟಿದೆ.

Sathish Kumar Raju

Sathish Kumar Raju

ತಲೆತಲಾಂತರದಿಂದ ಛಾಯಾಚಿತ್ರಗಾರರ ಕುಟುಂಬದಲ್ಲಿ ಹುಟ್ಟಿದವರು ಸತೀಶ್. ಅವರ ಮುತ್ತಾತ ೧೯೦೪ನೇ ಇಸವಿಯಲ್ಲಿ ಪಾಂಡಿಚೇರಿಯಲ್ಲಿ ಒಮ್ನಿ ಸ್ಟುಡಿಯೋ ಎಂಬ ಹೆಸರಿನಲ್ಲಿ ¸ ಆರಂಭಿಸಿದ್ದರು. ಇವರ ಛಾಯಚಿತ್ರದ ಮೋಹ ಆರಂಭವಾಗಿದ್ದು ಇವರ ತಂದೆ ಟೆರೇಸಿನಲ್ಲಿ ದೊಡ್ಡ ಸೈಜ಼ಿನ ಚಿತ್ರವೊಂದನ್ನು ಮುದ್ರಿಸುತ್ತಿದ್ದಾಗ. ಮುಟ್ರಮ್ ಎಂಬ ಮನೆಯ ಮಧ್ಯ ಭಾಗದಲ್ಲಿ ಅಥವಾ ಟೆರೇಸಿನ ಮೇಲೆ ಈ ಮುದ್ರಣದ ಕೆಲಸ ನಡೆಯುತ್ತಿತ್ತೆಂಬುದನ್ನು ಅವರು ಮೆಲುಕು ಹಾಕುತ್ತಾರೆ. ಅವರ ಮುತ್ತಜ್ಜಿ ಹೈಪೋ ವನ್ನು ಬೆರೆಸಿ ಸತೀಶರ ಕೈಯ್ಯನ್ನು ಅದರ ಶೀತಲತೆಯನ್ನು ಆಸ್ವಾದಿಸಲಿಕ್ಕಾಗಿ ಇಡುತ್ತಿದ್ದುದು ಮಧುರ ನೆನಪಾಗಿ ಉಳಿದಿದೆ. ಅವರ ಮೊದಲ ಮುದ್ರಣ ಒಬ್ಬ ವ್ಯಕ್ತಿಯ ಭಾವಚಿತ್ರ.ನಿಧಾನವಾಗಿ ಚಿತ್ರ ಮೂಡುವ ವಿಷಯ ಜಾದೂವಿನಂತಿದ್ದು ಅವರ ತಂದೆ ಜಾದೂಗಾರರೆನಿಸುವಂತೆ ಮಾಡಿತ್ತು. ಅಲ್ಲಿಂದಲೇ ಸತೀಶ್ ಅವರಿಗೆ ಚಿತ್ರದ ಒಲವು ಮೂಡಿತು.

ವಿಶುವಲ್ ಕಮ್ಯುನಿಕೇಶನ್ನಲ್ಲಿ ಲೊಯೊಲಾ ಬಿಎಸ್ಸಿ ಆಯ್ದುಕೊಂಡದ್ದು ಆದರೆ ಅವರ ಆಕಾಂಕ್ಷೆ ಛಾಯಾಗ್ರಹಣದ ಮೇಲಿತ್ತು. ಇಕ್ಬಾಲರ ನೆರಳಲ್ಲಿ ಎರಡು ವರ್ಷ ಕೆಲಸ ª ಮೂಲಕ ಅವರ ಆಸೆಗಳು ಗರಿಕೆದರಿದವು. ಎಲ್ ಎಲ್ ಎ ನಲ್ಲಿ ಕೆಲಸ ನಿರ್ವಹಿಸುವಾಗಲೇ ಛಾಯಗ್ರಹಣ ಯಾಕೆ ಅಭ್ಯಾಸ ಮಾಡಬೇಕೆಂಬುದರ ಅಗತ್ಯತೆಯ ಅರಿವಾಯಿತು. ಹಾಗೇ ಈ ಕೋರ್ಸ್ ಗೆ ಸೇರಲು ೨೦೦೬ರಲ್ಲಿ ತೀರ್ಮಾನಿಸಿದರು. ಈ ತರಬೇತಿ ಮುಗಿದ ಮೇಲೂ ಇಕ್ಬಾಲ್ ಅವರ ಹಲವು ಕೆಲಸಗಳಲ್ಲಿ ಸೇರಿದ್ದರು. ಅವರು ಗಮನವಿಟ್ಟು ಇಕ್ಬಾಲರ ಕಾರ್ಯಕ್ಷಮತೆಯನ್ನು ಕಲಿತುಕೊಂಡರು. ಛಾಯಗ್ರಹಣ ಮಾತ್ರವಲ್ಲದೆ, ವಿವಿಧ ಸಂಸ್ಕೃತಿ, ಆಹಾರ, ಜೀವನಶೈಲಿ, ಜನರ ಬಗೆಗೂ ಕಲಿತರು. ಇದುವೇ ಒಬ್ಬ ಪ್ರಖ್ಯಾತ ಆಟೋಮೊಬೈಲ್ ಛಾಯಾಗ್ರಾಹಕನನ್ನಾಗಿಸಿದೆ.ಲೈಟ್ ಅಂಡ್ ಲೈಫ್ ಅಕಾಡೆಮಿಯ ಮಾರ್ಗದರ್ಶಕರಲ್ಲೊಬ್ಬರಾಗಿದ್ದಾರೆ.

ಸಮಾಜಕ್ಕೆ ತಿರುಗಿ ತಾವೇನಾದರೂ ನೀಡಬೇಕೆಂಬ ತೀವ್ರ ದಾಹ ಮತ್ತು ಛಾಯಾಗ್ರಹಣದ ಬಗೆಗೆ ಜನರ ಪ್ರೋತ್ಸಾಹ ಅವರನ್ನು ವೃತ್ತಿಪರರಾಗಿಯೂ ಎಲ್ ಎಲ್ ಎ ಅಕಾಡೆಮಿಯ ಮಾರ್ಗದರ್ಶಿಯಾಗಿಯೂ ರೂಪುಗೊಳಿಸಿದೆ. ಅವರ ಪ್ರಕಾರ ಆನ್ಲೈನ್ ನಲ್ಲಿ ಫೋಟೋಗ್ರಫಿಯ ಬಗ್ಗೆ ಸಿದ್ಧ ಮಾಹಿತಿಗಳಿದ್ದರೂ ವೃತ್ತಿಪರರ ಸಲಹೆ, ಕೊರತೆಗಳ ಬಗೆಗೆ ತಿಳುವಳಿಕೆ ಕಲಿಯುವಿಕೆಯಲ್ಲಿ ಮುಖ್ಯವಾದದ್ದು. ಈ ಕೊರತೆಯನ್ನು ಪೂರ್ತಿಗೊಳಿಸುವುದೇ ಇವರ ಗುರಿ.

Shaheen

Shaheen Taha

ವೃತ್ತಿಪರ ಛಾಯಾಗ್ರಾಹಕರ ಮಗಳಾಗಿ ಹುಟ್ಟಿರುವುದು ನನ್ನ ಅದೃಷ್ಟ. ಹೀಗಾಗಿ ನಾಲ್ಕನೇ ವಯಸ್ಸಿನಲ್ಲೇ ನನ್ನ ಕೈಗೆ ಕ್ಯಾಮೆರಾ ಸಿಕ್ಕಿ ,ಛಾಯಾಚಿತ್ರಗಳನ್ನು ತೆಗೆಯಲಾರಂಭಿಸಿದೆ. ಅಲ್ಲಿಂದ ನನ್ನ ಪ್ರಯಾಣ ನಿಲ್ಲಲೇ ಇಲ್ಲ. ಕಾಲೇಜಿಗೆ ಬಂದಾಗ ಅಂದಿನ ಪರಿಸ್ಥಿತಿ ಇಂಜಿನಿಯರಿಂಗ್ ಕಡ್ಡಾಯ ಎಂಬಂತಾಗಿತ್ತು, ಹಾಗಾಗಿ ಆ ಗುಂಪಿನಲ್ಲಿ ಸೇರಲೇಬೇಕಾಯಿತು. ಇಂಜಿನಿಯರಿಂಗ್ ಕಲಿಯುತ್ತಿರುವಾಗ ನಾನು ಕಾರ್ ಡ್ರೈವಿಂಗ್ ಮಾಡುತ್ತಾ, ಹಲವು ಜಾಗಗಳನ್ನು ನೋಡುತ್ತಾ ಕಲ್ಪನಾ ಲೋಕದಲ್ಲಿ ಸಾಗುತ್ತಿದ್ದೆ. ನನ್ನ ಹವ್ಯಾಸ ಸಂಗೀತ. ವಿಜ್ನಾನ ನನ್ನನ್ನು ಬಹಳ ಕಷ್ಟಪಡಿಸುತ್ತಿದ್ದುದರಿಂದ ತಂದೆಯನ್ನು ಓಲೈಸಿ, ನನ್ನ ಮೆಚ್ಚಿನ ಕಲಾತ್ಮಕ ಕ್ಷೇತ್ರದ ಕಡೆಗೆ ಸಾಗಿದೆ. ನಾನು ವಿಗಾನ್ ಮತ್ತು ಲೇಗ್ ಕಾಲೇಜಿನಲ್ಲಿ ಮೂರು ವರ್ಷದ ಅಡ್ವರ್ಟೈಸಿಂಗ್ ಮತ್ತು ಡಿಸೈನಿಂಗ್ ಪದವಿ ಪಡೆದೆ. ಇದೇ ಸಮಯದಲ್ಲಿ ನನ್ನ ಛಾಯಾಚಿತ್ರದೆಡೆಗಿನ ಒಲವು ಲೈಟ್ ಅಂಡ್ ಲೈಫ್ ಅಕಾಡೆಮಿಯತ್ತ ಸೆಳೆಯಿತು. ಎಲ್ ಎಲ್ ಎ ಎಂಬುದು ನನ್ನ ಜೀವನದಲ್ಲಿ ಎಷ್ಟು ಪ್ರಾಮುಖ್ಯ ಎಂಬುದನ್ನು ಪದಗಳಲ್ಲಿ ಹೇಳಲಾಗದು. ಎಲ್ ಎಲ್ ಎ ನಿಂದಾಗಿ ಛಾಯಾಚಿತ್ರದ ಬಗೆಗಿನ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಯಿತು.

ಛಾಯಾಚಿತ್ರದ ಎಲ್ಲಾ ವಿಧಗಳೂ ನನಗೆ ತುಂಬಾ ಇಷ್ಟ.ಇಂದು, ಮುಖ್ಯವಾಗಿ ನಾನು ಮಾಡ್ತಿರೋದು ಫ್ಯಾಶನ್ ಫೋಟೋಗ್ರಫಿ, ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಫೋಟೋಗ್ರಫಿ ಹಾಗೂ ಚಲನಚಿತ್ರಗಳ ಪ್ರೋಮೋ. ಈಗಿನ ದಿನಗಳಲ್ಲಿ ಕಾಣ್ತಿರೋ ೩ಡಿ ರೀತಿಯಲ್ಲದೆ, ಸ್ವಲ್ಪ ಗಂಭೀರವಾದ ಆಟೋಮೊಬೈಲ್ ಫೋಟೋಗ್ರಫಿ ಮಾಡಬೇಕೆನ್ನುವುದು ನನ್ನ ನಿರೀಕ್ಷೆ. ಮತ್ತಿನ್ನೇನೂ ಸಂಕಲನವಿಲ್ಲದ ಅದ್ಭುತವಾದ ಆಟೋಮೊಬೈಲ್ನ ಚಿತ್ರವನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯಬೇಕೆನ್ನುವುದು ಆಕಾಂಕ್ಷೆ.

ಮತ್ತಿತರರ ಕೆಲಸವನ್ನು ನೋಡುವುದು, ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ನನಗೆ ತುಂಬಾ ಇಷ್ಟ. ಅನುಭವಗಳನ್ನು ಹಂಚಿಕೊಳ್ಳುವುದು ಉತ್ತಮ ಕಲಿಯುವಿಕೆ, ಹಾಗಾಗಿಯೇ ಎಲ್ ಎಲ್ ಎ ನಲ್ಲಿ ಮಾರ್ಗದರ್ಶಕಿಯಾಗಿರುವುದು ನನಗೆ ತುಂಬಾ ಸಂತೋಷ. ಭಾಷೆ ಅನ್ನುವುದು ತಡೆಯಾಗಿರುವ ಹಲವು ಮಂದಿ ಇದ್ದಾರೆ. ಅದ್ಭುತ ಪ್ರತಿಭೆ ಇದ್ದರೂ ಭಾಷೆ ಗೊತ್ತಿಲ್ಲದಿರುವುದರಿಂದ ಹಿಂದೆ ಸರಿಯುವವರಿದ್ದಾರೆ, ಅಂತಹವರಿಗಾಗಿಯೇ ಒಂಬತ್ತು ಭಾರತೀಯ ಭಾಷೆಗಳಲ್ಲಿ ಪಠ್ಯ ನೀಡಿರುವ ಈ ಅಮೋಘ ಉಪಾಯ ನಿಜಕ್ಕೂ ಸಹಕಾರಿ. ಎಲ್ ಎಲ್ ಎ ಕುಟುಂಬಕ್ಕೆ ಹಲವು ಮಂದಿ ಬರಲು ಇದೊಂದು ಉತ್ತಮ ಅವಕಾಶ ಎನ್ನುವುದು ನನಗಂತೂ ತುಂಬಾ ಸಂತೋಷ ನೀಡ್ತಿದೆ.

Shantanobho Das

Shantonobho Das

ನನ್ನ ತಂದೆಯ ಒಲಿಂಪಸ್ ನಿಂದ ನನ್ನ ಛಾಯಾಗ್ರಹಣದ ಪರಿಚಯವಾಯಿತು. ಮೊದಲ ಬಾರಿಗೆ ಅವರ ಕ್ಯಾಮೆರಾದಲ್ಲಿ ನನ್ನ ಬಿಂಬ ನೋಡಿದಾಗ ಅದು ನನ್ನನ್ನು ಆಕರ್ಷಿಸಿತು. ನೀಲಿ ಬಾನಿನ ಚಿತ್ರ, ವಿಸ್ತಾರ ಕಡಲು, ಮಳೆಹನಿಗಳು ಕ್ಯಾಮೆರಾ ಲೆನ್ಸ್ ಮೂಲಕ ಇನ್ನಷ್ಟು ಸುಂದರವಾಗಿದೆಯೆನಿಸಿತು. ಇದುವೇ ನನ್ನ ಛಾಯಾಗ್ರಹಣದ ಬಲವನ್ನು ಹೆಚ್ಚಿಸಿತು.

ಚಿಕ್ಕವಯಸ್ಸಿನಲ್ಲಿ ಅಮ್ಮನಿಗೆ ಅಡುಗೆಯಲ್ಲಿ ನೆರವಾಗುವುದು ನನ್ನ ಇನ್ನೊಂದು ಆಸಕ್ತಿಯಾಗಿತ್ತು,ಶಾಲೆ ಬಿಟ್ಟ ಬಳಿಕ, ಕಾಮರ್ಸ್ನಲ್ಲಿ ಡಿಗ್ರಿ ಪಡೆದೆ ಆದರೆ ನನ್ನನ್ನು ನಾನೇ ಚಿತ್ರಗಳ ಮೂಲಕ ಕಂಡುಕೊಳ್ಳಬೇಕೆಂದು ನಾನು ನಿಜಕ್ಕೂ ಬಯಸಿದ್ದೆ.ನಾನು ಒಂದು ವಿರಾಮ ತೆಗೆದುಕೊಂಡು ಒಂದು ಪ್ರವಾಸ ಆರಂಭಿಸಿದೆ. ಇದರ ಮೂಲಕ ಹಲವು ವಿಷಯಗಳು ಭಾಗಗಳ ಚಿತ್ರಗಳನ್ನು ಸೆರೆಹಿಡಿಯುವುದು ನನ್ನ ಉದ್ದೇಶವಾಗಿತ್ತು. ಈ ಹಡಗು ಪ್ರಯಾಣದ ಕೊನೆಯಲ್ಲಿ ನಾನು ವಿಷಯ ನನ್ನ ನಿಜವಾದ ಆಸಕ್ತಿ ಛಾಯಾಗ್ರಹಣ ಎಂಬುದು. ಇದು ನನ್ನ ಗತಿಯನ್ನು ಲೈಟ್ ಅಂಡ್ ಲೈಫ್ ಅಕಾಡೆಮಿಯತ್ತ ಸಾಗಿಸಿತು.

ಪ್ರಾಯೋಗಿಕ ತರಗತಿಗಳು, ಡೆಮೋಗಳು, ಅಸೈನ್ಮೆಂಟುಗಳು ನನ್ನನ್ನು ಆಕರ್ಷಿಸಿದವು. ಅವರ ಸಲಹೆಗಳು ಜನರ ಮತ್ತು ಪ್ರಕೃತಿಯ ದೃಶ್ಯಗಳನ್ನು ಸೆರೆಹಿಡಿಯುವಾಗ ನನಗೆ ಬಹಳಷ್ಟು ಅವಕಾಶಗಳನ್ನು ನೀಡಿತು. ಇಂದು, ನಾನು ನನ್ನ ಆಸಕ್ತಿ ಆಹಾರ, ಅದನ್ನು ಹಂಚುವುದು ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಎನ್ನುವುದರಲ್ಲಿದೆ.

ಯಾವಾಗಲೂ ಬೆಳೆಸುವುದು ಹಂಚುವುದರಲ್ಲಿ ಎಂಬ ಮಾತನ್ನು ನಂಬುತ್ತೇನೆ. ಎಲ್ ಎಲ್ ಎ ಪ್ರೋಗ್ರಾಮ್ ನನಗೆ ಶ್ರೀ ಇಕ್ಬಾಲ್ ಹಾಗೂ ಇತರ ಮಾರ್ಗದರ್ಶಕರು ಹೇಳಿಕೊಟ್ಟ ಮಾಹಿತಿಗಳನ್ನು ಈ ವಿಸ್ತಾರವಾದ ವೇದಿಕೆಯಾಲ್ಲಿ ಹಂಚಿಕೊಳ್ಳಲು ಅವಕಾಶ ನೀಡಿದೆ.

Sukil Tarnas

Sukil Tarnas

ನನ್ನ ಚಿಕ್ಕ ವಯಸ್ಸಿನಲ್ಲಿ ನಾನು ನಮ್ಮ ಕೌಟುಂಬಿಕ ಸ್ನೇಹಿತರಾಗಿದ್ದ ಪುರೋಹಿತರ ಬದುಕನ್ನು ನೋಡಿ ಪ್ರೇರೇಪಿತನಾಗಿದ್ದೆ, ಅವರು ನಮ್ಮ ಊರಿನಲ್ಲಿ ಒಂದು ಬೈಕ್ ಮೇಲೇರಿ ತಮ್ಮ ಸುತ್ತಲಿನ ಪ್ರದೇಶವನ್ನು ತಮ್ಮದೆಂದು ಸುತ್ತಾಡುತ್ತಿದ್ದರು. ಆಗ ನಾನೂ ನನ್ನದೆಂದು ಈ ರೀತಿಯ ಬದುಕು ಬಯಸಿದ್ದೆ. ಆದರೆ ಶಾಲಾ ನಿಗದಿತ ಸಮಯದ ನಂತರ ಅದು ನನ್ನದಲ್ಲದ ವಿಷಯವೆಂದು ನಿರ್ಧರಿಸಿ ಚೆನ್ನೈನ ಲೊಯೊಲಾ ಕಾಲೇಜಿಗೆ ಸೇರಿಕೊಂಡೆ. ನನ್ನ ಶಾಲಾ ದಿನಗಳನ್ನು ಮಧ್ಯಮ ತರಗತಿಯ ಶಾಲೆಗಳಲ್ಲಿ ಕಳೆದು ಕಾಲೇಜನ್ನು ಲೊಯೋಲಾದಂತ ಅತ್ಯುನ್ನತ ಸೇರಿ ನನ್ನ ಮೇಲೆ ಕೀಳರಿಮೆ ಮೂಡತೊಡಗಿತ್ತು. ದಲ್ಲಿ ಉತ್ತಮ ಅಂಕಪಡೆದು ಕೆಮೆಸ್ಟ್ರಿ ವಿಷಯವನ್ನು ಆಯ್ದುಕೊಂಡರೂ ಭಾಷೆಯ ಪರಿಣಾಮದಿಂದ ಓದು ಕಷ್ಟವಾಯಿತು, ಹೀಗಾಗಿ ತಪ್ಪಿಸಿ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಸೇರಿಕೊಂಡೆ. ನನಗೆ ಕಲೆ ಮತ್ತು ಕುಶಲಕಲೆಯಲ್ಲಿ ಆಸಕ್ತಿಯಿತ್ತು.ಹೀಗಾಗಿ ನನ್ನ ಹೆಚ್ಚಿನ ಸಮಯವನ್ನು ಹಾಸ್ಟೆಲನ್ನು ಸಿಂಗರಿಸುವುದರಲ್ಲಿ ಹಾಗೂ ವಿದ್ಯಾರ್ಥಿಗಳ ಅಲಂಕರಿಸುವುದರಲ್ಲಿ ಕಳೆಯುತ್ತಿದ್ದೆ.

ಈ ಸಂದರ್ಭದಲ್ಲಿ ಆಗ ದೊಡ್ಡ ವಿಚಾರವಾಗಿದ್ದ ವಿಶ್ವ ಸಮಾಜ ಸಂಘದಲ್ಲಿ ಭಾಗವಹಿಸಿದೆ. ನಂತರ ಹೈದರಾಬಾದ್ ನಲ್ಲಿ ನಡೆದ ಏಶಿಯನ್ ಸೋಶಿಯಲ್ ಫೋರಮ್ ಗಾಗಿ ಫ಼ಾದರ್ ಹೆನ್ರಿಯವರು ನನಗೆ ನಾಲ್ಕು ರೋಲ್ ತುಂಬಿದ್ದ ಡಿಎಸೆಲಾರ್ ಕ್ಯಾಮರಾವನ್ನು ಕೊಟ್ಟರು. ನನಗಾಗ ತಿಳಿಯಲಿಲ್ಲ ಆದರೂ ಅವರು ೧/೧೨೫ತ್ ಶಟ್ಟರ್ ಸ್ಪೀಡ್ನಲ್ಲಿ ಹಾಗೂ ಐ ಎಸ್ ಒ ೧೦೦ ರಲ್ಲಿ ಇಡಲು ಹೇಳಿಕೊಟ್ಟರು. ನಾನೇನೋ ಉತ್ತಮ ಕೆಲಸ ª ಹಾಗಾಗಿ ಫ಼ಾದರ್ ಹೆನ್ರಿಯವರು ಈ ಕೆಲಸವನ್ನೊಪ್ಪಿಸಿದ್ದರು. ಲೊಯೊಲಾದಲ್ಲೇ ವಿಶುವಲ್ ಕಮ್ಯುನಿಕೇಶನ್ ಗೆ ಸೀಟು ದೊರಕಿಸಿ ಕೊಟ್ಟರು, ಮತ್ತಿನ್ನೇನು? ಕೋರ್ಸು ಮುಗಿಯುವವರೆಗೂ ಖರ್ಚನ್ನು ಹೊಂದಿಸಲು ಕಲಿಯಲು ನೆರವಾದರು. ಇಲ್ಲಿಯೇ ನಾನು ಇಕ್ಬಾಲ್ ಸರ್ ಅನ್ನು ಭೇಟಿಯಾದೆ. ಮತ್ತು ಎಲ್ ಎಲ್ ಎ ಯ ಭಾಗವಾಗಲು ಸಿದ್ಧವಾದೆ.

ನಾನು ಎಲ್ ಎಲ್ ಎ ನಲ್ಲಿ ಕೆಲಸ ಮಾಡುತ್ತಲೇ ವೃತ್ತಿಪರ ಛಾಯಾಗ್ರಹಣ ಪದವಿ ಮುಗಿಸಿದೆ. ಇಕ್ಬಾಲ್ ಸರ್ ರೊಂದಿಗೆ ಕೆಲಸ ಮಾಡುತ್ತಾ ಕೈಗಾರಿಕಾ ಛಾಯಾಗ್ರಹಣದಲ್ಲಿ ನನ್ನ ಆಸಕ್ತಿಯನ್ನು ಬೆಳೆಸಿಕೊಂಡೆ. ಇದರೊಂದಿಗೆ ಆಹಾರದ ಶೂಟಿಂಗ್ ನನ್ನ ಮೆಚ್ಚಿನ ಕೆಲಸ.

ನನಗೆ ಎಲ್ ಎಲ್ ಎ ಆನ್ಲೈನ್ ಪ್ರೋಗ್ರಾಮ್ ನ ಅಂಗವಾಗಿರಲು ಬಹಳ ಸಂತೋಷವಾಗಿದೆ ಯಾಕೆಂದರೆ ಇಂದು ನಾನೇನಾಗಿರುವೆನೋ ಹಾಗಾಗಲು ಈ ಅಕಾಡೆಮಿಯೇ ಕಾರಣ. ನಾನೀಗ ನನ್ನಂತ ಹಲವರಿಗೆ ನೆರವಾಗಬಹುದು.

Vikram Hingmire

Vikram Hingmire

ಆದರೆ ಡೆಡ್ಲೈನ್ ಗಳು ನನ್ನನ್ನು ನನ್ನ ಆಸಕ್ತಿಯಿಂದ ದೂರ ಸರಿಯುವಂತೆ ಮಾಡಿತು. ಆ ಮಾನಸಿಕ ಒತ್ತಡ ಕ್ರಿಯಾತ್ಮಕ ವಿಚಾರಗಳನ್ನು ತಡೆಮಾಡಲಾರಂಭಿಸಿತು. ನನಗೀ ಒತ್ತಡದಿಂದ ಮುಕ್ತಿ ಹಾಗೂ ಮತ್ತೆ ನನ್ನ ಕ್ರಿಯಾಶೀಲತೆಗೆ ಜೀವ ನೀಡಬೇಕಾಗಿತ್ತು. ಆಗ ನಾನು ಛಾಯಾಗ್ರಹಣದ ಮೂಲಕ ಇದಕ್ಕೆ ದಾರಿ ಕಂಡುಹಿಡಿದೆ. ಇದು ಧ್ಯಾನದಂತೆ ಕೆಲಸ ಮಾಡಿತು. ಅನುಭವಗಳನ್ನು ದಾಖಲೆಯಾಗಿಡುವುದು, ಪದಗಳಿಲ್ಲದೇ ಕಥೆ ಹೇಳುವುದು ಇದರೊಳಗೆ ಕೊಂಡೊಯ್ಯಿತು. ಈ ಫೋಟೋಗಳು ನನ್ನ ಒಳಮನಸ್ಸಿನ ಸಾಕ್ಷಿ ಎಂದರಿತೆ. ಇನ್ನೂ ಶಕ್ತಿಯುತವಾಗಿ ಸೃಷ್ಟಿಯನ್ನು ಸೆರೆಹಿಡಿವ ಮಾಧ್ಯಮವಾಯಿತು. ನಾನೀಗ ಪ್ರದೇಶಗಳನ್ನು, ವಾಸ್ತುಶಿಲ್ಪವನ್ನು ನನ್ನ ಭಾವನೆಗಳ ಹೊರಚೆಲ್ಲುವಿಕೆಗಾಗಿ ಹುಡುಕಾಡುತ್ತಿದ್ದೇನೆ.

ಲೈಟ್ ಅಂಡ್ ಲೈಫ್ ಅಕಾಡೆಮಿ ಫೋಟೋಗ್ರಫ್ಯ್ ಎನ್ನೋ ತತ್ವಶಾಸ್ತ್ರವನ್ನು ಹೇಳಿಕೊಡುವ ಕಲ್ಪನೆಯನ್ನು ಸಾಕಾರಗೊಳಿಸುವ ಜಾಗ. ಅಂತರ್ಜಾಲದಂತ ಬೃಹತ್ ಮಾಧ್ಯಮವನ್ನು ಬಳಸಿ ಬೆಳೆಯುತ್ತಿರುವ ಪ್ರತಿಭೆಗಳಿಗೆ ಅವರದ್ದೇ ಹತ್ತು ಭಾಷೆಗಳಲ್ಲಿ ಹಲವಾರು ವಿಚಾರಗಳನ್ನು ತಿಳಿಸಿಕೊಡುತ್ತಿದೆ.

ನನ್ನ ತಂದೆ ನನ್ನ ಬಾಲ್ಯದಲ್ಲಿ ಚಿಕ್ಕ ಪ್ರದೇಶವನ್ನು ಅದ್ಭುತವಾಗಿ ಹಲವು ರೀತಿಯ ಗಿಡಗಳಿಂದ ತುಂಬುತ್ತಿದ್ದುದು, ನನ್ನ ಅಮ್ಮ ತನ್ನ ಕೌಶಲ್ಯವನ್ನು ಬಳಸಿ ಗೃಹದ ಒಳಾಲಂಕಾರ ಮಾಡುತ್ತಿದ್ದುದು ಈ ರೀತಿಯ ಹಲವಾರು ನೆನಪುಗಳು ಬಾಲ್ಯದ ತುಂಬಾ ತುಂಬಿವೆ. ಒಳಾಲಂಕಾರದ ತುಣುಕುಗಳು ಹಲವು ಮ್ಯಾಗಜಿನ್ ಗಳಿಂದ ಕತ್ತರಿಸಿ, ಪ್ರದೇಶವನ್ನೂ ನಾನೊಂದು ದಿನ ಈ ರೀತಿ ತಯಾರಿಸುವೆನೆಂಬ ಕನಸನ್ನು ಹೊತ್ತು ಅಂಟಿಸಿದ್ದಿದೆ. ಮೆಡಿಕಲ್ ಗೆ ಸೇರಿದ್ದರೂ, ಕ್ರಿಯಾತ್ಮಕ ಯೋಚನೆಗಳು ಆಹಾರದ ಜೋಡಣೆ, ಆಸೀನಗಳ ಜೋಡಣೆ ಹಲವಾರು ಬಾರಿ ನಡೆಯುತ್ತಿತ್ತು. ಬೆಳೆಯುತ್ತಿದ್ದ ಗಿಡಗಳು, ಗೋಡೆಯ ತುಂಬಾ ಫ್ರೇಮ್ ನಲ್ಲಿ ಜೋಡ್ಣೆಯಾಗುತ್ತಿದ್ದ ಪೈಂಟಿಂಗ್ ಗಳು, ಎಲ್ಲವೂ ನನ್ನನ್ನು ಕಲೆ ಮತ್ತು ವಾಸ್ತುಶಿಲ್ಪದತ್ತ ವಾಲುವಂತೆ ಮಾಡಿತ್ತು.