ನಮ್ಮ ಬಗ್ಗೆ

ಎಲ್ ಎಲ್ ಎ ಆನ್ ಲೈನ್ ವಿದ್ಯಾರ್ಥಿಗಳಿಗೆ ಒಂದು ರಚನಾತ್ಮಕ ಪಠ್ಯದ ಮೂಲಕ ಅವರ ಕ್ರಿಯಾತ್ಮಕ ಬದಿಯನ್ನು ನೋಡಲು ಮತ್ತು ಆವಿಷ್ಕರಿಸಲು ವೇದಿಕೆ. ಎಲ್ಲಾ ವೀಡಿಯೋಗಳೂ ಸರಣಿಗಳಾಗಿ ಕ್ರಮವಾಗಿ ನೀಡಲಾಗುತ್ತವೆ. ಈ ಮೂಲಕ ಎಲ್ಲಾ ಪಠ್ಯಗಳು ಇನ್ನೊಂದು ಪಠ್ಯಕ್ಕೆ ಹೋಗುವ ಮುನ್ನ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ.

ಒಂದೊಂದು ಮಾದರಿಯ ವೀಡಿಯೋ ಪಾಠವಾದ ಮೇಲೆ ವಿದ್ಯಾರ್ಥಿಗಳು ನೀಡಲಾಗಿರುವ ಅಸೈನ್ಮೆಂಟನ್ನು ಅಭ್ಯಾಸ ಮಾಡಬೇಕಾಗುತ್ತದೆ. ಮಾರ್ಗದರ್ಶಕರಾಗಿರುವವರು ಲೈಟ್ ಅಂಡ್ ಲೈಫ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಗಳು ಹಾಗೂ ದೇಶದೆಲ್ಲೆಡೆ ಇರುವ ಹಲವು ಕ್ಷೇತ್ರಗಳಲ್ಲಿರುವ ವೃತ್ತಿಪರ ಛಾಯಾಗ್ರಾಹಕರು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಾಲಮಿತಿಯಲ್ಲಿ ಸರಳವಾಗಿ ರಚನಾತ್ಮಕ ಪಠ್ಯಕ್ರಮಗಳನ್ನು ತಿಳಿಸಿಕೊಟ್ಟು ಕೋರ್ಸ್ ನ ಕೊನೆವರೆಗೂ ಮಾರ್ಗದರ್ಶನ ನೀಡುತ್ತಾ ಅವರ ಆಸೈನ್ಮೆಂಟುಗಳಲ್ಲಿ ಹಾಗೂ ಪಠ್ಯಗಳ ಮೇಲೆ ಪ್ರೀತಿ ಮೂಡಿಸುವಲ್ಲಿ ನೆರವಾಗುತ್ತಾರೆ. ಇದು ಮಾಡುವ ಮುಖ್ಯ ಕಾರಣ ಅವರ ಕಲಿಯುವಿಕೆಯ ಹಂತ ಮತ್ತು ಕ್ರಿಯಾತ್ಮಕತೆ ಉತ್ತಮ ಮಟ್ಟದಲ್ಲಿದೆ ಎಂಬುದನ್ನು ಖಚಿತಪಡಿಸಲು.

ಎಲ್ ಎಲ್ ಎ ಆನ್ ಲೈನ್ನಲ್ಲಿ ಲಭ್ಯವಿರುವ ಪ್ರತಿಯೊಂದು ಪೋಟೋಗ್ರಫಿ ಕೋರ್ಸ್, ಅಸೈನ್ಮೆಂಟ್ ಹಂತ, ಯಾವುದು ಫೈಲಿಂಗ್, ಮುಂದಿನ ಹಂತಕ್ಕೆ ಹೋಗಲಾಗದ/ಪೂರ್ಣಗೊಳಿಸಲಾರದ ವಿದ್ಯಾರ್ಥಿಗಳು ಈ ತತ್ವವು ಛಾಯಾಗ್ರಹಣದ ಬಗ್ಗೆ ಸಂಪೂರ್ಣ ಅರಿವು ಹಾಗೂ ತಿಳುವಳಿಕೆಯನ್ನು ನೀಡಿದೆಯೇ ಎಂದು ತಿಳಿಯಲು ನೆರವಾಗುತ್ತದೆ.

ಈ ಕೋರ್ಸ್ ಆಂಗ್ಲ ಭಾಷೆ ಮಾತ್ರವಲ್ಲದೆ ಒಂಬತ್ತು ಇತರ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ (ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು).

ದಿ ಸ್ಟೋರಿ ಬಿಹೈಂಡ್ LLA online

ಯು.ಎಸ್.ಎ, ಕ್ಯಾಲಿಫೋರ್ನಿಯಾ ದ ಬ್ರೂಕ್ಸ್ ವಿಶ್ವವಿದ್ಯಾಲಯದ ಛಾಯಾಗ್ರಹಣ ಪದವಿಯನ್ನು ಪಡೆದ ಹಾಲಿವುಡ್ ನ ವೃತ್ತಿಪರ ಛಾಯಾಗ್ರಾಹಕರಲ್ಲಿ ಬಹು ದೊಡ್ಡ ಹೆಸರುಗಳಲ್ಲಿ ಒಂದಾದ ಇಕ್ಬಾಲ್ ಮೊಹಮದ್ ಅವರು ಮತ್ತೆ ಭಾರತಕ್ಕೆ ಬಂದರು.

ಮುಂಬಯಿ ಮತ್ತು ಬೆಂಗಳೂರಲ್ಲಿ ಜಾಹೀರಾತು ಕ್ಷೇತ್ರದಲ್ಲಿ ತಮ್ಮ ಕಲಾಪ್ರೌಢಿಮೆಯನ್ನು ಮೆರೆದರು. ರಾಷ್ಟ್ರ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದರು. ಹಲವಾರು ಬೆಳೆಯಬಯಸುವ ಛಾಯಾಗ್ರಾಹಕರು ಇಕ್ಬಾಲ್ ಅವರ ಸ್ಟುಡಿಯೋದಲ್ಲಿ ತಮ್ಮ ಕಲಾನೈಪುಣ್ಯಕ್ಕೆ ಹಲವು ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದರು. ಇದರ ಪರಿಣಾಮವಾಗಿ ಇಕ್ಬಾಲ್ ಅವರಿಗೆ ಭಾರತದಲ್ಲಿ ವೃತ್ತಿಪರ ಛಾಯಾಗ್ರಹಣ ಕಲಿಯಲು ಒಂದು ವಿದ್ಯಾಲಯದ ಅಗತ್ಯತೆಯ ಅರಿವು ಮೂಡಿಸಿತು. ಅನುರಾಧಾ ಇಕ್ಬಾಲ್ ಅವರ ಸಹಕಾರದೊಂದಿಗೆ ಎಲ್ಲಾ ಅವಶ್ಯಕತೆಗಳೊಂದಿಗೆ 2001ರಲ್ಲಿ ದೇಶದಲ್ಲೇ ವೃತ್ತಿಪರ ಛಾಯಾಗ್ರಹಣಕ್ಕಾಗಿ ಪ್ರಪ್ರಥಮ ವಿಶ್ವವಿದ್ಯಾಲಯವಾಗಿ ಲೈಟ್ ಅಂಡ್ ಲೈಫ್ ಅಕಾಡೆಮಿ ಆರಂಭವಾಯಿತು. ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಹಲವು ವೃತ್ತಿಪರ ಅಭೂತಪೂರ್ವ ಛಾಯಾಚಿತ್ರಗಾರರನ್ನು ನೀಡಿದ ಬಹುದೊಡ್ಡ ಸಂಸ್ಥೆಯಾಗಿ ಲೈಟ್ ಅಂಡ್ ಲೈಫ್ ಅಕಾಡೆಮಿ ಕಳೆದ 17 ವರ್ಷಗಳಿಂದ ಬೆಳೆದು ಬಂದಿದೆ.

ಭೇಟಿ : www.llacademy.org & www.iqbalmohamed.com

ದೇಶದೆಲ್ಲೆಡೆ ಇರುವ ಪ್ರತಿಭಾವಂತ ಛಾಯಾಚಿತ್ರಗಾರರಿಗೆ ಅವಕಾಶ ಕಲ್ಪಿಸುವುದಕ್ಕಾಗಿ ಇಕ್ಬಾಲ್ ಹಾಗೂ ಅನುರಾಧಾ ಇಬ್ಬರೂ ಕನಸು ಕಂಡರು. ಪೋರ್ಟ್ರೇಟ್ ಅಂಡ್ ಫುನ್ಕ್ಷನ್ ಫೋಟೋಗ್ರಫಿ ಎಂಬ ಪುಸ್ತಕವನ್ನು ಹೊರತರುವ ಮೂಲಕ ಈ ಕನಸಿನ ಮೊದಲ ಹೆಜ್ಜೆ ಇಡಲಾಯಿತು. ಆಂಗ್ಲಭಾಷೆ ಮಾತ್ರವಲ್ಲದೆ ಭಾರತದ ಎಂಟು ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿತು. ಇದು ಬಹುಜನರಿಂದ ಸ್ವಾಗತಿಸಲ್ಪಟ್ಟಿತು.

ಲೈಟ್ ಅಂಡ್ ಲೈಫ್ ಅಕಾಡೆಮಿಯ ಆಳವಾದ ಅನುಭವ ಮತ್ತು ತಾಂತ್ರಿಕ ಜ್ಞಾನ ಈಗೇನು ಸಿಗುತ್ತಿದೆಯೋ ಛಾಯಾಗ್ರಹಣದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಹಲವು ಮಂದಿಯನ್ನು ತಲುಪಲು ಸಮಯ ಬೇಕೆಂದು ಅವರಿಬ್ಬರೂ ಅಂದೇ ಅಂದುಕೊಂಡರು.

ಛಾಯಾಗ್ರಹಣದ ಬಗ್ಗೆ ಸ್ವಲ್ಪ ಮಾತ್ರ ಜ್ಞಾನ ಅಥವಾ ಯಾವುದೇ ಅರಿವಿಲ್ಲದಿದ್ದರೂ ಸಹ ಎಲ್ ಎಲ್ ಎ ಆನ್ ಲೈನ್ ಗೆ ಪ್ರವೇಶ ಪಡೆಯುವ ಮೂಲಕ ಅವರವರ ಬಗ್ಗೆ ಕ್ರಿಯಾತ್ಮಕವಾಗಿ ತಿಳಿದುಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಕೌಶಲ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ರೋಗ್ರಾಮ್ ಸದಾ ಶಿಸ್ತನ್ನು ಪಾಲಿಸುವ ಛಾಯಾಗ್ರಹಣಕ್ಕಾಗಿ ಏನನ್ನಾದರೂ ಮಾಡಬಲ್ಲ ಇಕ್ಬಾಲ್ ಮೊಹಮದ್ ಅವರಿಂದ ರೂಪುಗೊಂಡಿದೆ.

ಭಾಗವಹಿಸುವ ವಿದ್ಯಾರ್ಥಿಗಳಿಗೆ ಎಲ್ಲ ಮಾರ್ಗದರ್ಶನ ನೀಡುವ ಹಾಗೂ ಎಲ್ಲಾ ರೀತಿಯ ನೆರವನ್ನೂ ನೀಡುವ ಎಲ್ ಎಲ್ ಎ ಯ ಹಳೆ ವಿದ್ಯಾರ್ಥಿಗಳು ಪ್ರೋಗ್ರಾಮ್ ಮಾಡುವಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಸಕಲ ಮಾರ್ಗದರ್ಶನವನ್ನು ನೀಡಿ ನಿಜಕ್ಕೂ ಎಲ್ ಎಲ್ ಎ ಆನ್ ಲೈನ್ ಪ್ರೋಗ್ರಾಮ್ ನ್ನು ವಿಶೇಷಗೊಳಿಸಿದ್ದಾರೆ.

ಇಕ್ಬಾಲ್ ಮೊಹಮದ್

ಇಕ್ಬಾಲ್ ಮೊಹಮದ್

www.iqbalmohamed.com

ಇಕ್ಬಾಲ್ ಮೊಹಮದ್ ಅವರು ಭಾರತದ ಪ್ರಖ್ಯಾತ ಜಾಹೀರಾತು ಛಾಯಾಗ್ರಾಹಕರಲ್ಲಿ ಒಬ್ಬರು. ಚೆನ್ನೈನ ಲೊಯೊಲಾ ಕಾಲೇಜಿನ ಇತಿಹಾಸ ಮತ್ತು ರಾಜ್ಯಶಾಸ್ತ್ರ ಪದವಿ , ಮದರಾಸು ವಿಶ್ವವಿದ್ಯಾಲಯದ ಎಂಬಿಎ ಪದವಿ ಮಾತ್ರವಲ್ಲದೆ ಬ್ರೂಕ್ಸ್ ಇನ್ಸ್ಟಿಟ್ಯುಟ್ ನ ಪದವಿಯನ್ನೂ ಹೊಂದಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಗ್ರಾಹಕರನ್ನು ಹೊಂದಿರುವುದು ಮಾತ್ರವಲ್ಲದೆ ಫೋರ್ಡ್, ಟೊಯೋಟಾ, ಫಿಯಾಟ್, ತಾಜ್ ಗ್ರಾಪ್ ಆಫ್ ಹಹೋಟೆಲ್, ಕಲರ್ಸ್ ಪ್ಲಸ್, ಪೋಂಡ್ಸ್, ಟಿವಿಎಸ್, ಟೈಮೆಕ್ಸ್, ರೀಬೋಕ್, ಜಿ.ಇ., ಬಿಪಿಲ್, ಕೊಕೊಕೊಲ, ಅಶೋಕ್ ಲೇಯ್ಲ್ಯಂಡ್, ಕ್ಯಾರ್ನ್ ಇಂಡಿಯಾ, ತಮಿಳ್ನಾಡು ಟೂರಿಸಂ ಇತ್ಯಾದಿ ಅನೇಕ ಕಂಪನಿಗಳ ಛಾಯಾಚಿತ್ರಗಳ ರೂವಾರಿಯಾಗಿದ್ದಾರೆ. ಎನ್ ಜಿ ಒ ಗಳಲ್ಲಿ ಸರಕಾರದೊಂದಿಗೆ ಕೈಜೋಡಿಸಿ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ.

ಹಲವು ಮಂದಿಗೆ ಛಾಯಾಗ್ರಹಣದ ಬಗ್ಗೆ ತಿಳಿಯಬೇಕೆಂಬ ಉದ್ದೇಶದೊಂದಿಗೆ ಆಂಗ್ಲ ಮಾತ್ರವಲ್ಲದೆ ಎಂಟು ಭಾಷೆಗಳಲ್ಲಿ ಪ್ರಪ್ರಥಮವಾಗಿ ಪ್ರಕಾಶಿಸಲ್ಪಟ್ಟ ಪುಸ್ತಕವೇ ಪೋರ್ಟ್ರೇಟ್ ಅಂಡ್ ಫುನ್ಕ್ಷನ್ ಫೋಟೋಗ್ರಫಿ. ಇದರ ವಿಬ್ರಾಂಟ್ ಅಟ್ 1000 ಎಂಬ ತಂಜಾವೂರಿನ ದೇವಾಲಯದ ಬಗೆಗಿನ ಪುಸ್ತಕ ನೆನಪಿನಲ್ಲಿಡುವಂಥದ್ದು. ಯುನೆಸ್ಕೋದ ವರ್ಲ್ಡ್ ಹೆರಿಟೇಜ್ ಸೈಟಿಂಗ್ - 'ದಿ ನಿಲ್ಗಿರಿಸ್ ಮೌಂಟನ್ ರೈಲ್ವೆ ಅಂಡ್ ಚೋಳ ಆರ್ಕಿಟೆಕ್ಚರ್' ಎಂಬ ಎರಡು ಕಾಫೀ ಟೇಬಲ್ ಪುಸ್ತಕಗಳ ಪೋಟೋಗ್ರಫಿ ಇಕ್ಬಾಲ್ ಅವರದ್ದಾಗಿದೆ. ವಿಶ್ವಮಟ್ಟದಲ್ಲಿ ಇಕ್ಬಾಲ್ ಅವರು ಮಾತ್ರವಲ್ಲದೆ ಅವರ ಛಾಯಾಗ್ರಹಣವೂ ಪ್ರಸಿದ್ಧಿ ಪಡೆದಿದೆ. ಇವರ ಛಾಯಾಚಿತ್ರಗಳು ಹಲವು ಪ್ರಶಸ್ತಿಗಳಿಗೂ ಪ್ರಸಿದ್ಧಿಗೂ ಭಾಜನವಾಗಿವೆ. ಅವರ ಉದ್ದೇಶ ಬಹಳ ಜನರನ್ನು ಸ್ಫೂರ್ತಿಗೊಳಿಸುವುದು. ಭಾವನೆಗಳನ್ನು ಹಾಗೂ ಕ್ರಿಯಾತ್ಮಕತೆಯನ್ನು ಬೆಳೆಸುವುದಾಗಿದೆ.

ಅನುರಾಧಾ ಇಕ್ಬಾಲ್

ಅನುರಾಧಾ ಇಕ್ಬಾಲ್

ಇಕ್ಬಾಲ್ ಅವರು ಎಲ್ ಎಲ್ ಎ ಆನ್ ಲೈನ್ ನ ಕ್ರಿಯಾತ್ಮಕ ಶಕ್ತಿಯಾದರೆ ಅನುರಾಧಾ ಅವರು ಯೋಜನೆಗಳ ಮತ್ತು ಕಾರ್ಯಗತಗೊಳಿಸುವ ಶಕ್ತಿಸೆಲೆ. ಹತ್ತು ವರ್ಷಗಳಿಗೂ ಮಿಗಿಲಾದ ಮಾರ್ಕೆಟಿಂಗ್ ಮತ್ತು ಜಾಹೀರಾತು ಕ್ಷೇತ್ರದ ಅನುಭವವಿರುವ ಇವರು ಎಲ್ಲಾ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳ ಆಗರಕ್ಕೆ ಕಾರಣೀಭೂತರಾದರು. ಲೈಟ್ ಅಂಡ್ ಲೈಫ್ ಅಕಾಡೆಮಿಯ ಸಹ ಸಂಸ್ಥಾಪಕಿ.

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ನಲ್ಲಿ ಗ್ರಾಜುವೇಟ್ ಹಾಗೂ ಎಕನಾಮಿಕ್ಸ್ ಪೋಸ್ಟ್ ಗ್ರಾಜುವೇಟ್ ಆಗಿದ್ದಾರೆ. ಜಾಹೀರಾತು ಮತ್ತು ಮಾರ್ಕೆಟಿಂಗ್ ನಲ್ಲಿ ಡಿಪ್ಲೋಮಾ ಹಾಗೇ ಹಲವಾರು ಮ್ಯಾನೇಜ್ಮೆಂಟ್ ತರಬೇತಿಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಂಡಿದ್ದಾರೆ. ಪ್ರಾಕೃತಿಕ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಕಲೆ ಗುರುತಿಸಿ ಹಾಗೂ ಅದನ್ನು ಪೋಷಿಸುವುದು ಅವರ ಕನಸಾಗಿದೆ.

ಪ್ರಹ್ಲಾದ ಮುರಳೀಧರನ್

ಪ್ರಹ್ಲಾದ ಮುರಳೀಧರನ್

ಜನರು ಹೇಗೆ ಚಿಂತಿಸುತ್ತಾರೆ. ಕೆಲವು ವಿಷಯಗಳಲ್ಲಿ ಅವರೇಕೆ ಹಾಗೆ ವರ್ತಿಸುತ್ತಾರೆ. ಸಂಘಟನೆಗಳು ವೈಷಮ್ಯ. ಜನರನ್ನು ಒಂದುಗೂಡಿಸುವುದು ಯಾವುದು? ಯಾವುದು ಬೇರೆ ಮಾಡುವುದು. ಈ ಎಲ್ಲಾ ವಿಷಯಗಳೂ ಪ್ರಹ್ಲಾದ್ ಅವರನ್ನು ಕುತೂಹಲಪಡಿಸಿತ್ತು. ಹಾಗಾಗಿ ಮನಶ್ಶಾಸ್ತ್ರವನ್ನು ಕಲಿಯುವಂತೆ ಮಾಡಿತ್ತು. ಪ್ರತ್ಯೇಕವಾಗಿ ಮನುಷ್ಯನ ಬಗ್ಗೆ ಅಭ್ಯಾಸ ಮಾಡಿ ನಂತರ ಸಂಘಗಳ ಬಗ್ಗೆ ಅಭ್ಯಾಸ ಮಾಡಲು ಹೊರಟರು. ಪೋಸ್ಟ್ ಗ್ರಾಜುವೇಶನ್ ಅನ್ನು ಸಮಾಜ ಸೇವೆಯಲ್ಲಿ ಮುಖ್ಯ ವಿಷಯವಾಗಿ ಮೆಡಿಕಲ್ ಸೈಕಿಯಾಟ್ರಿ ಕಲಿತರು. ಮನುಷ್ಯ ಮನುಷ್ಯನನ್ನು ಬೆಸೆಯುವುದೇ ಇವರ ಮೂಲೋದ್ದೇಶ.

ಛಾಯಾಗ್ರಹಣದಲ್ಲಿ ಇಕ್ಬಾಲ್ ಅವರೊಂದಿಗೆ ಕೈಜೋಡಿಸಿ ಮಕ್ಕಳ ಹಾಗೂ ಕೈಲೇಜು ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಹಾಗೇ ಹಲವು ಛಾಯಾಚಿತ್ರಗಳನ್ನು ತೆಗೆಯುತ್ತಾ ಒಂದು ಛಾಯಾಚಿತ್ರವು ಭಾಷಾತೀತವಾದದ್ದು ಅಲ್ಲದೆ ಸಂವಹನ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪಾಗದು ಎಂಬುದನ್ನು ಕಂಡುಕೊಂಡರು.

ಅಲ್ಲಿಂದ ನಂತರ ಪ್ರಹ್ಲಾದ್ ಅವರು ಇಕ್ಬಾಲ್ ಮೊಹಮದ್ ಮತ್ತು ಅನುರಾಧಾ ಅವರೊಂದಿಗೆ ಸೇರಿ ಛಾಯಾಚಿತ್ರದ ಮೂಲಕ ಜನರು ಹೇಗೆ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಮತ್ತು ಜನರ ಮೂಡ್ ಅನ್ನು ಬದಲಾಯಿಸಲು ಅವರನ್ನು ಸಂಪರ್ಕಿಸಲು ಎಂಬುದರ ಬಗ್ಗೆ ಅಧ್ಯಯನ ಮಾಡತೊಡಗಿದರು.

ಎಲ್ ಎಲ್ ಎ ಆನ್ ಲೈನ್ ಫೋಟೋಗ್ರಫಿ ಶಿಕ್ಷಣ ಕಾರ್ಯಕ್ರಮ ಈ ವಿಷಯಗಳ ಅಧ್ಯಯನಕ್ಕೆ ಸಹಕಾರಿ

ಲೈಟ್ & ಲೈಫ್ ಅಕಾಡೆಮಿಯ ವೃತ್ತಿಪರ ಛಾಯಾಗ್ರಹಣ ಕಾರ್ಯಕ್ರಮ ಮತ್ತು 8 ಭಾಷೆಗಳಲ್ಲಿ ಛಾಯಾಗ್ರಹಣದಲ್ಲಿ ಭಾರತದ ಮೊದಲ ಪುಸ್ತಕ, ಪೋರ್ಟ್ರೇಟ್ & ಫಂಕ್ಷನ್ ಛಾಯಾಗ್ರಹಣ, ಎಲ್ಎಲ್ಎ ಆನ್ಲೈನ್ ​​ಛಾಯಾಗ್ರಹಣ ಪ್ರೋಗ್ರಾಂ ಸಹ ಪ್ರವರ್ತಕ ಪ್ರಯತ್ನವಾಗಿದೆ.