ಮಾರ್ಗದರ್ಶಕರು

ಎಲ್ಎಲ್ಎ ಆನ್ಲೈನ್ ​​ಪ್ರೋಗ್ರಾಂನ ಪ್ರತಿ ಮಾರ್ಗದರ್ಶಕನು ಲಘು ಮತ್ತು ಲೈಫ್ ಅಕಾಡೆಮಿಯಿಂದ ವೃತ್ತಿಪರ ಛಾಯಾಗ್ರಹಣದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾನೆ, ಇದು ನಂಬಲಾಗದಷ್ಟು ಕಠಿಣ ತರಬೇತಿ ಪಡೆದಿದೆ. ಅವರು ಪ್ರಸ್ತುತ ಭಾರತದಾದ್ಯಂತ ತಮ್ಮ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ವಿವಿಧ ಹಿನ್ನೆಲೆಯಿಂದ ಮತ್ತು ಸಂಸ್ಕೃತಿಯಿಂದ ಬರುತ್ತಾರೆ, ಸೌಂದರ್ಯದ ಸಂವೇದನಾಶೀಲತೆಗಳ ಸಂಪತ್ತನ್ನು ನಿರ್ವಹಿಸುತ್ತಾರೆ. LLA ನಲ್ಲಿ ಒಂದೇ ತಾಂತ್ರಿಕ ಮತ್ತು ಕಲಾತ್ಮಕ ತರಬೇತಿಯಿಂದ ಎಲ್ಲರೂ ಪದವೀಧರರಾಗಿದ್ದರಿಂದ ನೀಡಲಾದ ಪ್ರತಿಕ್ರಿಯೆಯ ವಿಷಯದಲ್ಲಿ ಸ್ಥಿರತೆ ಇರುತ್ತದೆ.

Ankit Gupta

Ankit Gupta

ಅಂಕಿತ್ ಗುಪ್ತ ಬೆಳೆದದ್ದು ಡೆಲ್ಲಿಯಲ್ಲಿ. ಬಹುದೊಡ್ಡ ಅಭಿಮಾನಿ. ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಎಂದು ಅವಕಾಶ ಸಿಕ್ಕಾಗಲೆಲ್ಲಾ ಆಟವಾಡುತ್ತಿದ್ದರು. ಎಲ್ಲರಂತೆ ಅಂಕಿತ್ ಅವರೂ ಸಹ ಯಾವುದಾದರೊಂದು ದಾರಿಯನ್ನು ಶಾಲೆ ಮುಗಿದ ನಂತರ ಆಯ್ದುಕೊಳ್ಳಬೇಕಿತ್ತು.ಒಂದೋ ಡಾಕ್ಟರ್ ಅಥವಾ ಇಂಜಿನಿಯರ್. ಅಂಕಿತ್ ಅವರು ಇಂಜಿನಿಯರಿಂಗ್ ಆಯ್ದುಕೊಂಡರು. ಕಾಲೇಜಿನಿಂದ ನೇರವಾಗಿ ಆಯ್ಕೆಯಾಗಿ ಮೈಸೂರಿಗೆ ವರ್ಗಾಯಿಸಿದರು ವಾಸ್ತವ್ಯವನ್ನು. ಮೈಸೂರಿಗೆ ಹೋಗುವ ಮೊದಲು ಅವರ ತಾಯಿ ಒಂದು ಡಿಎಸೆಲಾರ್ ಅನ್ನು ಉಡುಗೊರೆಯಾಗಿ ಕೊಟ್ಟರು. ಇದುವೇ ಆರಂಭ.ನಾಲ್ಕು ವರ್ಷಗಳು ಇನ್ಫೋಸಿಸ್ನಲ್ಲಿ ಕೆಲಸ ಮಾಡಿ ವಿದೇಶದಲ್ಲಿ ಎಮ್ ಬಿ ಎ ಪಡೆಯುವ ಆಕಾಂಕ್ಷೆ ಹೊಂದಿದ್ದರು.

ಈ ಎಲ್ಲಾ ಯೊಜನೆಗಳೂ ಅಂಕಿತ್ ಅವರ ಮನೆಯೊಡತಿಯ ಬಳಿ ಮಾತಾಡಿದ ನಂತರ ಬದಲಾಯಿತು. ಅವರು ಹೇಳಿದ ಮಾತುಗಳು ಅಂಕಿತ್ ಅವರನ್ನು ಭಾರತದಲ್ಲೇ ಉಳಿಯುವಂತೆ ಮಾಡಿತು. ಐದು ವರ್ಷಗಳಿಗೊಮ್ಮೆ ತಾಯ್ನಾಡಿಗೆ ಬರುವ ಆ ದುರವಸ್ಥೆಯನ್ನು ಪಡೆಯಬೇಕಾಗಿಲ್ಲವೆಂದು ನಿರ್ಧರಿಸಿ ಇನ್ಫ಼ೋಸಿಸನ್ನು ಬಿಟ್ಟು ಡೆಲ್ಲಿಗೆ ಹಿಂದಿರುಗಿದರು. ಅಲ್ಲಿಂದ ತಂದೆಯ ಉದ್ಯೋಗದಲಿ ಕೈಜೋಡಿಸುವ ಮನಸಾಗದೆ, ಫೋಟೋಗ್ರಫಿಯತ್ತ ಮುಖ ಮಾಡಿದರು. ಸ್ನೇಹಿತರು ಹಾಗೂ ಕುಟುಂಬದವರಿಂದ ಸಿಕ್ಕ ಬೆಂಬಲದಿಂದ ಅವರ ಆತ್ಮವಿಶ್ವಾಸ ಹೆಚ್ಚಿತು,.ಕಾಶ್ಮೀರದ ಕಣಿವೆಯ ಅಂದಚಂದದ ಸೊಬಗಿಗೆ ಮಾರುಹೋಗಿ ಕಡೆಗೆ ಒಲವು ಬಲವಾಯಿತು.

ಹಲವು ಚಿಂತೆಗಳನ್ನು ಮಾಡಿ ಕೊನೆಗೆ ಎಲ್ ಎಲ್ ಎ ಗೆ ಬಂದು ಅವರ ಪದವಿಯನ್ನು ಪೂರೈಸಿ ಪ್ರಯಾಣದ ,ವಾಸ್ತುಶಿಲ್ಪ ಹಾಗೂ ಒಳಾಂಗಣದಲ್ಲಿ ವಿಶೇಷ ಪರಿಣತಿ ಪಡೆದರು.

ಸಮಾಜಕ್ಕೆ ತಾನು ಪಡೆದದ್ದನ್ನು ಹಿಂತಿರುಗಿಸಬೇಕೆಂಬ ನಿಲುವು ಇವರದು. ಎಲ್ ಎಲ್ ಎ ಆನ್ ಲೈನ್ ಮೂಲಕ ಅವರ ಅರಿವನ್ನು ಹಂಚಲು ವೇದಿಕೆ ಸಿಕ್ಕಿದೆಯೆಂಬುದು ಬಹಳ ಸಂತೋಷದ ವಿಚಾರ.

Garima Chaudhary

Garima Chaudhary

ರಿಮಾ ಅವರ ಕಲೆಯ ಬಗೆಗಿನ ಆಸಕ್ತಿ ಅವರು ಎಂಟನೇ ತರಗತಿಯಲ್ಲಿರುವಾಗಲೇ ಆರಂಭವಾಯ್ತು.ಅಲ್ಲಿಂದಲೇ ಬೇರೆ ಬೇರೆ ಕಲಾ ವಿಷಯಗಳ ತರಬೇತಿಗಳಿಗಾಗಿ ಹುಡುಕಾಟ ಆರಂಭಿಸಿದರು. ತರಗತಿಯ ಪರೀಕ್ಶೆಗಳ ನಂತರ ಸಿವಿಲ್ ಸರ್ವಿಸ್ ತೆಗೆದು ಇತಿಹಾಸವನ್ನು ಅಭ್ಯಾಸ ಮಾಡತೊಡಗಿದರು. ಚೆನ್ನಾಗಿ ಆಂಕಗಳನ್ನು ಪಡೆಯುತ್ತಿದ್ದರೂ ಏ ನೋ ಒಂದು ಕೊರತೆ ಅವರನ್ನು ಕಾಡುತ್ತಿತ್ತು. ಅವರಿಗಿನ್ನೂ ಏನೋ ಬೇಕಾಗಿತ್ತು. ಹೆತ್ತವರಿಗೆ ತಿಳಿಯದೇ ಕಲೆ ಪದವಿಗೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡರು. ಹೆತ್ತವರನ್ನು ಹೇಗೋ ಒಪ್ಪಿಸಿ, ಆ ಪದವಿಗೆ ಸೇರಿಕೊಂಡರು. ಅಲ್ಲಿಯೇ ಮೊದಲ ಬಾರಿಗೆ ಅವರಿಗೆ ಛಾಯಾಗ್ರಹಣದ ಪರಿಚಯವಾಯಿತು. ವಿವಿತಾರ್ ನೊಂದಿಗೆ ಛಾಯಾಗ್ರಾಹಕಿಯಾಗಿ ಅವರಪ್ರಯಾಣ ಆರಂಭವಾಯಿತು.

ಆನಿಮೇಶನ್ ನಲ್ಲಿ ವಿಶೇಷ ಅಭ್ಯಾಸ ಪಡೆದು, ವಿಸುವಲೈಸರ್ ಆಗಿ ಕೆಲಸ ಮಾಡುತ್ತಾ ಅವರ ಪೋಸ್ಟ್ ಗ್ರಾಜುವೇಶನ್ ಮುಗಿಸಿದರು. ಅವರ ಹೆತ್ತವರೊಂದಿಗೆ ವಾಗ್ವಾದ ಕೊನೆಗೆ ಅವರನ್ನು ತನ್ನ ಒಲವಿನತ್ತ ಸಾಗಲು ಒಪ್ಪಿಸಿದರು. ಅವರ ಕ್ಷೇತ್ರದಲ್ಲಿ ಸಂತೋಷ ಹಾಗೇ ಉತ್ತಮ ಆದಾಯವೂ ಬರತೊಡಗಿದಾಗ ಹೆತ್ತವರೂ ಸಮಾಧಾನಗೊಂಡರು.

ಅವರ ಪ್ರತಿಭೆಯ ಮೂಲಕ ತನ್ನ ಪತಿಯನ್ನು ತೃಪ್ತನಾಗಿಸಿ ಡಿಎಸೆಲಾರ್ ನ್ನು ಉಡುಗೊರೆಯಾಗಿ ಪಡೆದರು. ನಂತರ ಅವರು ಎಲ್ ಎಲ್ ಎ ಗೆ ಅರ್ಜಿ ಸಲ್ಲಿಸಿ ವೃತ್ತಿಪರ ಛಾಯಾಗ್ರಹಣದ ಪದವಿಯನ್ನು ಮುಗಿಸಿದರು.

೨೦೧೧ರಲ್ಲಿ ಗರಿಮ ಅವರು ಹಲವಾರು ಇ ಕಾಮರ್ಸ್ ಅಸೈನ್ಮೆಂಟ್ ಗಳಿಸಿ ಇ ಕಾಮರ್ಸ್ ವೇವ್ ಬ್ಯಾಕ್ ಪಡೆದರು. ೨೦೧೧ರಲ್ಲಿ ಅವರ ಸ್ಟುಡಿಯೋ ಆರಂಭಿಸಿದರು. ಅವರ ಅರಿವನ್ನು ಒರೆ ಹಚ್ಚಿ ಹಲವು ಕೆಲಸಗಳನ್ನು ಮಾಡಿದರು. ಬೆಂಗಳೂರಿನಲ್ಲಿರುವ ಅವರು ಕಲಾ ನಿರ್ದೇಶಕರಾಗಿ,ಗ್ರಾಫಿಕ್ ಡಿಸೈನರ್ ಆಗಿ, ಪೈಂಟರ್ ಆಗಿ, ಛಾಯಾಗ್ರಾಹಕಿ ಹಾಗೂ ಬ್ಲಾಗು ಬರಹಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಲವು ಮಂದಿಗೆ ತಲುಪಬೇಕಾದ ಕಲೆ ಫೋಟೋಗ್ರಫಿ ಎಂಬುದು ಇವರ ನಂಬಿಕೆ. ಎಲ್ ಎಲ್ ಎ ಆನ್ ಲೈನ್ ಮೂಲಕ ಹಲವು ಭಾಷೆಗಳ ಮೂಲಕಹಲವರಿಗೆ ಇದು ತಲುಪುವುದು ಎಂದು ಅವರ ಭರವಸೆ. ಎಲ್ ಎಲ್ ಎ ಆನ್ಲೈನ್ ಬಗ್ಗೆ ಸಂತೋಷದಿಂದಿದ್ದಾರೆ.

kavitha

Kavitha Swaminathan

ತಿರುಪ್ಪೂರಿನ ಪ್ರಸಿದ್ಧ ಹಾಗೂ ಶ್ರೀಮಂತ ಕುಟುಂಬದ ಕವಿತಾ ಬಹಳಷ್ಟು ಪಾಕೆಟ್ ಮನಿಯೊಂದಿಗೆ ಪ್ರತೀವಾರ ಶಾಲೆಗೆ ಬರುತ್ತಿದ್ದರು.ಅವರಿಗೆ ಗೊತ್ತಿದ್ದ ಒಂದೇ ವಿಷಯ ,ಎಷ್ಟೇ ಚೊಕೊಲೇಟ್ ತಿಂದರೂ ಕಣ್ಣು ಇನ್ನೊಂದನ್ನು ಅರಸಿ ಹೋಗುತ್ತಿತ್ತು. ಶಾಲೆಯಲ್ಲಿ ಉತ್ತಮ ಅಂಕ ಗಳಿಸಿ ಡಾಕ್ಟರ್ ಆಗಬೇಕೆಂಬ ಬಯಕೆಯೊಂದಿಗೆ, ಜ಼ೂವಾಲಜಿ, ಫಿಸಿಕ್ಸ್,ಬಾಟನಿಗೆ ಗಮನ ಹರಿಸಿದರು. ಡಾಕ್ಟ್ರೇಟ್ ಪದವಿಗಿನ್ನೂ ಒಂದು ವಾರವಿರುವಾಗ ತನ್ನಿಂದ ಅದು ಸಾಧ್ಯವಿಲ್ಲವೆಂದು ನೊಂದು ಅದಕ್ಕೆ ತಿಲಾಂಜಲಿ ನೀಡಿದರು. ನಂತರ ಹಲವು ಕಡೆ ಬಿಕಾಂ ಪದವಿಗೆ ಪ್ರಯತ್ನಿಸಿ ಕೊನೆಗೆ ಪೆರಂಡುರೈನ ಮಹಾರಾಜಾ ಕಾಲೇಜಿನಲ್ಲಿ ವಿಶುವಲ್ ಕಮ್ಮ್ಯುನಿಕೇಶನ್ ಗೆ ಸೇರಿಕೊಂಡರು. ಪೆಂಟ್ಯಾಕ್ಸ್ ಕೆ ೧೦೦, ಸ್ವಾತಂತ್ರ್ಯ, ಕತ್ತಲೆಕೋಣೆ ಇವೆಲ್ಲವೂ ಅವರ ಮನದಾಳದಲ್ಲಿ ಹೋಗಿ ನಿಂತಿತು. ಎಲ್ಲರೂ ತಮ್ಮ ಉತ್ತಮ ಭಾವಚಿತ್ರವನ್ನು ಬಯಸುತ್ತಾರಲ್ಲವೇ? ಅವರ ಎಲ್ಲಾ ಭಾವನೆಗಳನ್ನೂ ಹೊರಹಾಕಲು ಛಾಯಾಚಿತ್ರವು ನೆರವಾಯಿತೆನ್ನುತ್ತಾರೆ ಕವಿತ. ಫೋಟೋ ತೆಗೆಯುವಾಗ ನಾಯಿಯ ನೋವು, ಹೂವಿನ ಅಂದ, ವಿಸ್ತಾರವಾದ ಸೌಂದರ್ಯ, ಇವೆಲ್ಲವೂ ಫೋಟೋದೊಂದಿಗೆ ಅನಾವರಣಗೊಳ್ಳುತ್ತದೆ. ಅಂದೇ ಅವರು ತಮ್ಮ ಜೀವನದುದ್ದಕ್ಕೂ ಛಾಯಾಗ್ರಾಹಕಿಯಾಗಿರಬೇಕೆಂದು ನಿರ್ಧರಿಸಿದರು.

ಎಲ್ ಎಲ್ ಎ ನಲ್ಲಿ ೨೦೦೨ ರಲ್ಲಿ ಕಲಿತರು. ಪ್ರತೀದಿನವೂ .. ಕೋರ್ಸ್ ಮುಗಿದ ನಂತರವು ಇನ್ನೊಬ್ಬ ವೃತ್ತಿಪರ ಛಾಯಾಗ್ರಾಹಕರನ್ನು ನೋಡಿದಾಗೆಲ್ಲಾ ಇನ್ನೂ ಬೆಳೆಯಬೇಕೆಂಬ ಭಾವ ಮೂಡುತ್ತಿತ್ತು. ಅವರೀಗ ಲೈಟ್ ಅಂಡ್ ಲೈಫ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತೀದಿನವೂ ಕಲಿಸುತ್ತ, ಕಲಿಯುತ್ತ ತಾನೊಬ್ಬ ಉತ್ತಮ ಛಾಯಾಗ್ರಾಹಕಿ ಗುರಿಯಲ್ಲಿದ್ದಾರೆ. ಹಾಗೇ ತಾನು ಸಾಧಿಸಿದ್ದನ್ನು ಇತರರಿಗೂ ಹಂಚಬೇಕೆಂದು ಹಾಗೇ ಫೋಟೋಗ್ರಫಿಯ ಆಳವನ್ನು ಇನ್ನಷ್ಟು ಅರಿಯಬೇಕೆನ್ನುವ ಉತ್ಸಾಹದಲ್ಲಿದ್ದಾರೆ. ಎಲ್ ಎಲೆ ಆನ್ ಲೈನ್ , ಅವರೆನ್ನುವಂತೆ, ಇದು ಒಂಬತ್ತು ಭಾಷೆಗಳಲ್ಲಿರುವುದರಿಂದ ಹಲವು ಪ್ರತಿಭಾವಂತರಿಗೆ ನೆರವಾಗಬಲ್ಲದು ಎನ್ನುತ್ತಾರೆ.

Khushboo Agarwal

Khushboo Agarwal

ನೆನಪಿನಂಗಳದಲ್ಲಿ ಸಾಗುತ್ತಾ ನನ್ನ ತಂದೆ ತಮ್ಮ ಹುಟ್ಟೂರಾದ ಕಲ್ಕತ್ತಾವನ್ನು ಬಿಟ್ಟು ಚೆನ್ನೈಯಲ್ಲಿ ಬಂದು ನೆಲೆಸಿ ಸ್ವಂತ ಉದ್ಯೋಗವನ್ನಾರಂಭಿಸಿದರು. ಆಳವಾಗಿ ಬೇರೂರಿದ್ದ ಉತ್ತರ ಭಾರತದ ಆಚಾರ, ಜನರು ,ಆಹಾರ ಸಂಸ್ಕೃತಿಯ ತವರೂರಾದ ತಮಿಳುನಾಡಿನ ನೆರಳು ಹೀಗೆ ನನಗೆ ಎರಡೂ ಭಾಗಗಳ ಪ್ರಭಾವ ಸಂತೋಷವನ್ನೇ ತಂದಿತ್ತು.

ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ನಾಟಕ, ಚರ್ಚೆ,ಹೀಗೆ ಹಾಡೊಂದನ್ನು ಬಿಟ್ಟು ಉಳಿದೆಲ್ಲದರಲ್ಲೂ ಭಾಗವಹಿಸುತ್ತಿದ್ದೆ. ತರಗತಿಯಲ್ಲಿ ಮೊದಲ ಸ್ಥಾನ ಪಡೆಯುವುದು ನನ್ನ ಗುರಿಯಾಗಿತ್ತು. ಆದರೆ ಹತ್ತನೇ ತರಗತಿಯ ಫಲಿತಾಂಶ ಬಂದು ನಾನದರಲ್ಲಿ ಐದನೇ ಸ್ಥಾನ ಪಡೆದಿದ್ದೆ ಎಂದು ತಿಳಿದಾಗ ಎಲ್ಲವೂ ಬದಲಾಯಿತು.

ನನ್ನ ಆತ್ಮವಿಶ್ವಾಸ ಕುಗ್ಗಿತು.ನಾನು ಸರಳವಾಗಿ ವಿಷಯವನ್ನು ಕೊಂಡೊಯ್ಯೋಣವೆಂದು ನಿರ್ಧರಿಸಿದೆ. ನೃತ್ಯ, ಭರತನಾಟ್ಯ,ಕಥಕ್, ಹೀಗೆ ಯಾಗಿ ಗುರುತಿಸಿಕೊಂಡೆ. ಕಲಿಯುವಿಕೆಯನ್ನು ಆನಂದಿಸತೊಡಗಿದೆ.ನಂತರ ಜಿವ್,ಸಾಲ್ಸಾ, ಭಚತಾ ವನ್ನು ಸೇರಿಸಿಕೊಂಡೆಜೀವನ ಚೆನ್ನಾಗಿ ಸಾಗುತ್ತಿತ್ತು, ನಾನು ವಿಸುವಲ್ ಕಮ್ಮ್ಯುನಿಕೇಶನ್ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಆಗ ಫೋಟೋಗ್ರಫಿಯ ಪರಿಚಯವಾಗಿ ನನ್ನ ಜೀವನದ ದಿಕ್ಕೇ ಬದಲಾಯಿತು. ಇಡೀ ಜಗತ್ತಿನೊಂದಿಗೆ ಸಂಪರ್ಕ ಹೊಂದುವ ಶಕ್ತಿ ಅದು ನನಗೆ ನೀಡಿತು. ಆಗಲೇ ಲೈಟ್ ಅಂಡ್ ಲೈಫ್ ಅಕಾಡೆಮಿಯ ಆಗಮನವಾಯಿತು. ನನ್ನ ಪ್ರತಿ ಕ್ಷಣವನ್ನೂ ಆನಂದಿಸಿದೆ.

ಇಂದು ನಾನಿನ್ನೂ ವಿವಿಧತೆಯನ್ನು ಹುಡುಕುತ್ತಿದ್ದೇನೆ. ನನ್ನ ವೃತ್ತಿ ಫೋಟೋಗ್ರಫಿಯಾಗಿದ್ದರೂ ನೃತ್ಯ ಮಾಡುವುದು ಹೇಳಿಕೊಡುವುದು ನನ್ನ ಆನಂದ. ಈಗ ನನಗೆ ನನ್ನ ಅರಿವನ್ನು ಹಂಚಿಕೊಳ್ಳುವ ಅಪೂರ್ವ ಅವಕಾಶ ಎಲ್ ಎಲ್ ಎ ಆನೈನ್ ಮೂಲಕ ಸಿಕ್ಕಿದೆ, ನನ್ನ ಸಂತೋಷ ದ್ವಿಗುಣವಾಗಿದೆ,

Rejoi Krishna

Rejoi Krishna

ನನಗೆ ಸಾಧಾರಣ ಮಧ್ಯಮವರ್ಗದ ಜನ ಬಯಸುವಂತೆ ಇಂಜಿನಿಯರಿಂಗ್ ಮೆಡಿಸಿನ್ ಕಲಿಯಬೇಕೆಂಬ ಆಯ್ಕೆ ಇರಲಿಲ್ಲ. ನನಗಿದ್ದ ಒಂದೇ ಒಂದು ಬಯಕೆ ಕೊಯಂಬತ್ತೂರಿನ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಸೈಕಾಲಜಿ ಕಲಿಯಬೇಕೆಂಬುದಾಗಿತ್ತು. ಎರಡನೇ ವರ್ಷದಲ್ಲಿ ವಿಸ್ಕಮ್ ಎಂಬ ವಿಷಯ ಪರಿಚಯವಾಯಿತು. ವಿಸ್ಕಾಮ್ ನ ವಿದ್ಯಾರ್ಥಿಗಳೊಡನೆ ಮಾತಾಡುತ್ತ ನನ್ನ ಅಸ್ತಿತ್ವ ಜನರನ್ನು ಮನೋರಂಜಿಸುವುದರಲ್ಲಿದೆ ಎಂದು ಭಾವಿಸಿ ರೇಡಿಯೋ ಮಿರ್ಚಿಯಲ್ಲಿ ಆರ್ ಜೆ ಆಗಿ ಸೇರಿಕೊಂಡೆ. ನಾನು ಕೆಲವೇ ದಿನಗಳಲ್ಲಿ ಪ್ರಸಿದ್ಧಿ ಪಡೆದೆ. ಏಳು ವರ್ಷಗಳ ನಂತರ ನಾನು ಜೀವನದಲ್ಲಿ ಏನೋ ಬೇರೆ ಮಾಡಬೇಕೆಂದು ಅರಿತೆ. ವಿಭಿನ್ನವಾಗಿ ಮಾಡಬೇಕೆಂದು ನಿರ್ಧರಿಸಿ ಫೋಟೋಗ್ರಫಿಯನ್ನು ಆಯ್ದುಕೊಂಡೆ. ನಾನು ಅನುಭವಿಸಿದ ವಿಷಯಗಳಿಂದ ಜನರನ್ನು ರಂಜಿಸದೆ ನಾನು ನೋಡಿದ ವಿಷಯಗಳನ್ನು ಅವರಿಗೆ ತೋರಿಸಿ ಸಂತೋಷಪಡಿಸಬೇಕೆಂದು ತೀರ್ಮಾನಿಸಿದೆ.

ನಾನು ಲೈಟ್ ಅಂಡ್ ಲೈಫ್ ಅಕಾಡೆಮಿಯಲ್ಲಿ ಕಲಿಯಬೇಕೆಂದು ನಿರ್ಧರಿಸಿ ಸೇರಿದೆ. ಎಲ್ಲಾ ಕಲೆಗಳು ಅಭ್ಯಾಸ ಮಾಡುತ್ತಾ ನನ್ನ ಕನಸು ವೃತ್ತಿಪರ ಛಾಯಾಗ್ರಹಣದತ್ತ ವಾಲಿತು. ಎಲ್ ಎಲ್ ಎ ಅಕಾಡೆಮಿಯು ಕಲಿಯಲು ವಯಸ್ಸು ಮುಖ್ಯವಲ್ಲ, ಮನಸು ಮುಖ್ಯವೆಂದು ಪ್ರೋತ್ಸಾಹಿಸಿತು. ಇಂದಿನ ನನ್ನನ್ನು ರೂಪಿಸಿದ ಎಲ್ ಎಲ್ ಎ ಗೆ ಅಪಾರ ಋಣಿ.

ನನ್ನನ್ನು ಒಬ್ಬ ವಾಸ್ತುಶಿಲ್ಪಕಾರ ಮೊಬೈಲ್,ಪ್ರವಾಸೀ ಛಾಯಾಗ್ರಾಹಕನೆಂದು ಅರಿತುಕೊಳ್ಳುತ್ತಿದ್ದೇನೆ, ನಾನೇನು ಕಲಿತೆನೋ ಅದನ್ನು ಹಂಚಿಕೊಳ್ಳಲು ಎಲ್ ಎಲ್ ಎ ಆನ್ಲೈನ್ ಅವಕಾಶ ಮಾಡಿಕೊಟ್ಟಿದೆ.

Sathish Kumar Raju

Sathish Kumar Raju

ತಲೆತಲಾಂತರದಿಂದ ಛಾಯಾಚಿತ್ರಗಾರರ ಕುಟುಂಬದಲ್ಲಿ ಹುಟ್ಟಿದವರು ಸತೀಶ್. ಅವರ ಮುತ್ತಾತ ೧೯೦೪ನೇ ಇಸವಿಯಲ್ಲಿ ಪಾಂಡಿಚೇರಿಯಲ್ಲಿ ಒಮ್ನಿ ಸ್ಟುಡಿಯೋ ಎಂಬ ಹೆಸರಿನಲ್ಲಿ ¸ ಆರಂಭಿಸಿದ್ದರು. ಇವರ ಛಾಯಚಿತ್ರದ ಮೋಹ ಆರಂಭವಾಗಿದ್ದು ಇವರ ತಂದೆ ಟೆರೇಸಿನಲ್ಲಿ ದೊಡ್ಡ ಸೈಜ಼ಿನ ಚಿತ್ರವೊಂದನ್ನು ಮುದ್ರಿಸುತ್ತಿದ್ದಾಗ. ಮುಟ್ರಮ್ ಎಂಬ ಮನೆಯ ಮಧ್ಯ ಭಾಗದಲ್ಲಿ ಅಥವಾ ಟೆರೇಸಿನ ಮೇಲೆ ಈ ಮುದ್ರಣದ ಕೆಲಸ ನಡೆಯುತ್ತಿತ್ತೆಂಬುದನ್ನು ಅವರು ಮೆಲುಕು ಹಾಕುತ್ತಾರೆ. ಅವರ ಮುತ್ತಜ್ಜಿ ಹೈಪೋ ವನ್ನು ಬೆರೆಸಿ ಸತೀಶರ ಕೈಯ್ಯನ್ನು ಅದರ ಶೀತಲತೆಯನ್ನು ಆಸ್ವಾದಿಸಲಿಕ್ಕಾಗಿ ಇಡುತ್ತಿದ್ದುದು ಮಧುರ ನೆನಪಾಗಿ ಉಳಿದಿದೆ. ಅವರ ಮೊದಲ ಮುದ್ರಣ ಒಬ್ಬ ವ್ಯಕ್ತಿಯ ಭಾವಚಿತ್ರ.ನಿಧಾನವಾಗಿ ಚಿತ್ರ ಮೂಡುವ ವಿಷಯ ಜಾದೂವಿನಂತಿದ್ದು ಅವರ ತಂದೆ ಜಾದೂಗಾರರೆನಿಸುವಂತೆ ಮಾಡಿತ್ತು. ಅಲ್ಲಿಂದಲೇ ಸತೀಶ್ ಅವರಿಗೆ ಚಿತ್ರದ ಒಲವು ಮೂಡಿತು.

ವಿಶುವಲ್ ಕಮ್ಯುನಿಕೇಶನ್ನಲ್ಲಿ ಲೊಯೊಲಾ ಬಿಎಸ್ಸಿ ಆಯ್ದುಕೊಂಡದ್ದು ಆದರೆ ಅವರ ಆಕಾಂಕ್ಷೆ ಛಾಯಾಗ್ರಹಣದ ಮೇಲಿತ್ತು. ಇಕ್ಬಾಲರ ನೆರಳಲ್ಲಿ ಎರಡು ವರ್ಷ ಕೆಲಸ ª ಮೂಲಕ ಅವರ ಆಸೆಗಳು ಗರಿಕೆದರಿದವು. ಎಲ್ ಎಲ್ ಎ ನಲ್ಲಿ ಕೆಲಸ ನಿರ್ವಹಿಸುವಾಗಲೇ ಛಾಯಗ್ರಹಣ ಯಾಕೆ ಅಭ್ಯಾಸ ಮಾಡಬೇಕೆಂಬುದರ ಅಗತ್ಯತೆಯ ಅರಿವಾಯಿತು. ಹಾಗೇ ಈ ಕೋರ್ಸ್ ಗೆ ಸೇರಲು ೨೦೦೬ರಲ್ಲಿ ತೀರ್ಮಾನಿಸಿದರು. ಈ ತರಬೇತಿ ಮುಗಿದ ಮೇಲೂ ಇಕ್ಬಾಲ್ ಅವರ ಹಲವು ಕೆಲಸಗಳಲ್ಲಿ ಸೇರಿದ್ದರು. ಅವರು ಗಮನವಿಟ್ಟು ಇಕ್ಬಾಲರ ಕಾರ್ಯಕ್ಷಮತೆಯನ್ನು ಕಲಿತುಕೊಂಡರು. ಛಾಯಗ್ರಹಣ ಮಾತ್ರವಲ್ಲದೆ, ವಿವಿಧ ಸಂಸ್ಕೃತಿ, ಆಹಾರ, ಜೀವನಶೈಲಿ, ಜನರ ಬಗೆಗೂ ಕಲಿತರು. ಇದುವೇ ಒಬ್ಬ ಪ್ರಖ್ಯಾತ ಆಟೋಮೊಬೈಲ್ ಛಾಯಾಗ್ರಾಹಕನನ್ನಾಗಿಸಿದೆ.ಲೈಟ್ ಅಂಡ್ ಲೈಫ್ ಅಕಾಡೆಮಿಯ ಮಾರ್ಗದರ್ಶಕರಲ್ಲೊಬ್ಬರಾಗಿದ್ದಾರೆ.

ಸಮಾಜಕ್ಕೆ ತಿರುಗಿ ತಾವೇನಾದರೂ ನೀಡಬೇಕೆಂಬ ತೀವ್ರ ದಾಹ ಮತ್ತು ಛಾಯಾಗ್ರಹಣದ ಬಗೆಗೆ ಜನರ ಪ್ರೋತ್ಸಾಹ ಅವರನ್ನು ವೃತ್ತಿಪರರಾಗಿಯೂ ಎಲ್ ಎಲ್ ಎ ಅಕಾಡೆಮಿಯ ಮಾರ್ಗದರ್ಶಿಯಾಗಿಯೂ ರೂಪುಗೊಳಿಸಿದೆ. ಅವರ ಪ್ರಕಾರ ಆನ್ಲೈನ್ ನಲ್ಲಿ ಫೋಟೋಗ್ರಫಿಯ ಬಗ್ಗೆ ಸಿದ್ಧ ಮಾಹಿತಿಗಳಿದ್ದರೂ ವೃತ್ತಿಪರರ ಸಲಹೆ, ಕೊರತೆಗಳ ಬಗೆಗೆ ತಿಳುವಳಿಕೆ ಕಲಿಯುವಿಕೆಯಲ್ಲಿ ಮುಖ್ಯವಾದದ್ದು. ಈ ಕೊರತೆಯನ್ನು ಪೂರ್ತಿಗೊಳಿಸುವುದೇ ಇವರ ಗುರಿ.

Shantanobho Das

Shantonobho Das

ನನ್ನ ತಂದೆಯ ಒಲಿಂಪಸ್ ನಿಂದ ನನ್ನ ಛಾಯಾಗ್ರಹಣದ ಪರಿಚಯವಾಯಿತು. ಮೊದಲ ಬಾರಿಗೆ ಅವರ ಕ್ಯಾಮೆರಾದಲ್ಲಿ ನನ್ನ ಬಿಂಬ ನೋಡಿದಾಗ ಅದು ನನ್ನನ್ನು ಆಕರ್ಷಿಸಿತು. ನೀಲಿ ಬಾನಿನ ಚಿತ್ರ, ವಿಸ್ತಾರ ಕಡಲು, ಮಳೆಹನಿಗಳು ಕ್ಯಾಮೆರಾ ಲೆನ್ಸ್ ಮೂಲಕ ಇನ್ನಷ್ಟು ಸುಂದರವಾಗಿದೆಯೆನಿಸಿತು. ಇದುವೇ ನನ್ನ ಛಾಯಾಗ್ರಹಣದ ಬಲವನ್ನು ಹೆಚ್ಚಿಸಿತು.

ಚಿಕ್ಕವಯಸ್ಸಿನಲ್ಲಿ ಅಮ್ಮನಿಗೆ ಅಡುಗೆಯಲ್ಲಿ ನೆರವಾಗುವುದು ನನ್ನ ಇನ್ನೊಂದು ಆಸಕ್ತಿಯಾಗಿತ್ತು,ಶಾಲೆ ಬಿಟ್ಟ ಬಳಿಕ, ಕಾಮರ್ಸ್ನಲ್ಲಿ ಡಿಗ್ರಿ ಪಡೆದೆ ಆದರೆ ನನ್ನನ್ನು ನಾನೇ ಚಿತ್ರಗಳ ಮೂಲಕ ಕಂಡುಕೊಳ್ಳಬೇಕೆಂದು ನಾನು ನಿಜಕ್ಕೂ ಬಯಸಿದ್ದೆ.ನಾನು ಒಂದು ವಿರಾಮ ತೆಗೆದುಕೊಂಡು ಒಂದು ಪ್ರವಾಸ ಆರಂಭಿಸಿದೆ. ಇದರ ಮೂಲಕ ಹಲವು ವಿಷಯಗಳು ಭಾಗಗಳ ಚಿತ್ರಗಳನ್ನು ಸೆರೆಹಿಡಿಯುವುದು ನನ್ನ ಉದ್ದೇಶವಾಗಿತ್ತು. ಈ ಹಡಗು ಪ್ರಯಾಣದ ಕೊನೆಯಲ್ಲಿ ನಾನು ವಿಷಯ ನನ್ನ ನಿಜವಾದ ಆಸಕ್ತಿ ಛಾಯಾಗ್ರಹಣ ಎಂಬುದು. ಇದು ನನ್ನ ಗತಿಯನ್ನು ಲೈಟ್ ಅಂಡ್ ಲೈಫ್ ಅಕಾಡೆಮಿಯತ್ತ ಸಾಗಿಸಿತು.

ಪ್ರಾಯೋಗಿಕ ತರಗತಿಗಳು, ಡೆಮೋಗಳು, ಅಸೈನ್ಮೆಂಟುಗಳು ನನ್ನನ್ನು ಆಕರ್ಷಿಸಿದವು. ಅವರ ಸಲಹೆಗಳು ಜನರ ಮತ್ತು ಪ್ರಕೃತಿಯ ದೃಶ್ಯಗಳನ್ನು ಸೆರೆಹಿಡಿಯುವಾಗ ನನಗೆ ಬಹಳಷ್ಟು ಅವಕಾಶಗಳನ್ನು ನೀಡಿತು. ಇಂದು, ನಾನು ನನ್ನ ಆಸಕ್ತಿ ಆಹಾರ, ಅದನ್ನು ಹಂಚುವುದು ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಎನ್ನುವುದರಲ್ಲಿದೆ.

ಯಾವಾಗಲೂ ಬೆಳೆಸುವುದು ಹಂಚುವುದರಲ್ಲಿ ಎಂಬ ಮಾತನ್ನು ನಂಬುತ್ತೇನೆ. ಎಲ್ ಎಲ್ ಎ ಪ್ರೋಗ್ರಾಮ್ ನನಗೆ ಶ್ರೀ ಇಕ್ಬಾಲ್ ಹಾಗೂ ಇತರ ಮಾರ್ಗದರ್ಶಕರು ಹೇಳಿಕೊಟ್ಟ ಮಾಹಿತಿಗಳನ್ನು ಈ ವಿಸ್ತಾರವಾದ ವೇದಿಕೆಯಾಲ್ಲಿ ಹಂಚಿಕೊಳ್ಳಲು ಅವಕಾಶ ನೀಡಿದೆ.

Sukil Tarnas

Sukil Tarnas

ನನ್ನ ಚಿಕ್ಕ ವಯಸ್ಸಿನಲ್ಲಿ ನಾನು ನಮ್ಮ ಕೌಟುಂಬಿಕ ಸ್ನೇಹಿತರಾಗಿದ್ದ ಪುರೋಹಿತರ ಬದುಕನ್ನು ನೋಡಿ ಪ್ರೇರೇಪಿತನಾಗಿದ್ದೆ, ಅವರು ನಮ್ಮ ಊರಿನಲ್ಲಿ ಒಂದು ಬೈಕ್ ಮೇಲೇರಿ ತಮ್ಮ ಸುತ್ತಲಿನ ಪ್ರದೇಶವನ್ನು ತಮ್ಮದೆಂದು ಸುತ್ತಾಡುತ್ತಿದ್ದರು. ಆಗ ನಾನೂ ನನ್ನದೆಂದು ಈ ರೀತಿಯ ಬದುಕು ಬಯಸಿದ್ದೆ. ಆದರೆ ಶಾಲಾ ನಿಗದಿತ ಸಮಯದ ನಂತರ ಅದು ನನ್ನದಲ್ಲದ ವಿಷಯವೆಂದು ನಿರ್ಧರಿಸಿ ಚೆನ್ನೈನ ಲೊಯೊಲಾ ಕಾಲೇಜಿಗೆ ಸೇರಿಕೊಂಡೆ. ನನ್ನ ಶಾಲಾ ದಿನಗಳನ್ನು ಮಧ್ಯಮ ತರಗತಿಯ ಶಾಲೆಗಳಲ್ಲಿ ಕಳೆದು ಕಾಲೇಜನ್ನು ಲೊಯೋಲಾದಂತ ಅತ್ಯುನ್ನತ ಸೇರಿ ನನ್ನ ಮೇಲೆ ಕೀಳರಿಮೆ ಮೂಡತೊಡಗಿತ್ತು. ದಲ್ಲಿ ಉತ್ತಮ ಅಂಕಪಡೆದು ಕೆಮೆಸ್ಟ್ರಿ ವಿಷಯವನ್ನು ಆಯ್ದುಕೊಂಡರೂ ಭಾಷೆಯ ಪರಿಣಾಮದಿಂದ ಓದು ಕಷ್ಟವಾಯಿತು, ಹೀಗಾಗಿ ತಪ್ಪಿಸಿ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಸೇರಿಕೊಂಡೆ. ನನಗೆ ಕಲೆ ಮತ್ತು ಕುಶಲಕಲೆಯಲ್ಲಿ ಆಸಕ್ತಿಯಿತ್ತು.ಹೀಗಾಗಿ ನನ್ನ ಹೆಚ್ಚಿನ ಸಮಯವನ್ನು ಹಾಸ್ಟೆಲನ್ನು ಸಿಂಗರಿಸುವುದರಲ್ಲಿ ಹಾಗೂ ವಿದ್ಯಾರ್ಥಿಗಳ ಅಲಂಕರಿಸುವುದರಲ್ಲಿ ಕಳೆಯುತ್ತಿದ್ದೆ.

ಈ ಸಂದರ್ಭದಲ್ಲಿ ಆಗ ದೊಡ್ಡ ವಿಚಾರವಾಗಿದ್ದ ವಿಶ್ವ ಸಮಾಜ ಸಂಘದಲ್ಲಿ ಭಾಗವಹಿಸಿದೆ. ನಂತರ ಹೈದರಾಬಾದ್ ನಲ್ಲಿ ನಡೆದ ಏಶಿಯನ್ ಸೋಶಿಯಲ್ ಫೋರಮ್ ಗಾಗಿ ಫ಼ಾದರ್ ಹೆನ್ರಿಯವರು ನನಗೆ ನಾಲ್ಕು ರೋಲ್ ತುಂಬಿದ್ದ ಡಿಎಸೆಲಾರ್ ಕ್ಯಾಮರಾವನ್ನು ಕೊಟ್ಟರು. ನನಗಾಗ ತಿಳಿಯಲಿಲ್ಲ ಆದರೂ ಅವರು ೧/೧೨೫ತ್ ಶಟ್ಟರ್ ಸ್ಪೀಡ್ನಲ್ಲಿ ಹಾಗೂ ಐ ಎಸ್ ಒ ೧೦೦ ರಲ್ಲಿ ಇಡಲು ಹೇಳಿಕೊಟ್ಟರು. ನಾನೇನೋ ಉತ್ತಮ ಕೆಲಸ ª ಹಾಗಾಗಿ ಫ಼ಾದರ್ ಹೆನ್ರಿಯವರು ಈ ಕೆಲಸವನ್ನೊಪ್ಪಿಸಿದ್ದರು. ಲೊಯೊಲಾದಲ್ಲೇ ವಿಶುವಲ್ ಕಮ್ಯುನಿಕೇಶನ್ ಗೆ ಸೀಟು ದೊರಕಿಸಿ ಕೊಟ್ಟರು, ಮತ್ತಿನ್ನೇನು? ಕೋರ್ಸು ಮುಗಿಯುವವರೆಗೂ ಖರ್ಚನ್ನು ಹೊಂದಿಸಲು ಕಲಿಯಲು ನೆರವಾದರು. ಇಲ್ಲಿಯೇ ನಾನು ಇಕ್ಬಾಲ್ ಸರ್ ಅನ್ನು ಭೇಟಿಯಾದೆ. ಮತ್ತು ಎಲ್ ಎಲ್ ಎ ಯ ಭಾಗವಾಗಲು ಸಿದ್ಧವಾದೆ.

ನಾನು ಎಲ್ ಎಲ್ ಎ ನಲ್ಲಿ ಕೆಲಸ ಮಾಡುತ್ತಲೇ ವೃತ್ತಿಪರ ಛಾಯಾಗ್ರಹಣ ಪದವಿ ಮುಗಿಸಿದೆ. ಇಕ್ಬಾಲ್ ಸರ್ ರೊಂದಿಗೆ ಕೆಲಸ ಮಾಡುತ್ತಾ ಕೈಗಾರಿಕಾ ಛಾಯಾಗ್ರಹಣದಲ್ಲಿ ನನ್ನ ಆಸಕ್ತಿಯನ್ನು ಬೆಳೆಸಿಕೊಂಡೆ. ಇದರೊಂದಿಗೆ ಆಹಾರದ ಶೂಟಿಂಗ್ ನನ್ನ ಮೆಚ್ಚಿನ ಕೆಲಸ.

ನನಗೆ ಎಲ್ ಎಲ್ ಎ ಆನ್ಲೈನ್ ಪ್ರೋಗ್ರಾಮ್ ನ ಅಂಗವಾಗಿರಲು ಬಹಳ ಸಂತೋಷವಾಗಿದೆ ಯಾಕೆಂದರೆ ಇಂದು ನಾನೇನಾಗಿರುವೆನೋ ಹಾಗಾಗಲು ಈ ಅಕಾಡೆಮಿಯೇ ಕಾರಣ. ನಾನೀಗ ನನ್ನಂತ ಹಲವರಿಗೆ ನೆರವಾಗಬಹುದು.